alex Certify ಈ ಕಾರಣಕ್ಕೆ ಸಾರ್ವಜನಿಕ ಪ್ರದೇಶದಲ್ಲಿ ರೊಮ್ಯಾನ್ಸ್ ಮಾಡ್ತಾರೆ ಜೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಸಾರ್ವಜನಿಕ ಪ್ರದೇಶದಲ್ಲಿ ರೊಮ್ಯಾನ್ಸ್ ಮಾಡ್ತಾರೆ ಜೋಡಿ…!

ಭಾರತ ಎಲ್ಲ ಸಂಗತಿಗಳಲ್ಲೂ ಬದಲಾಗ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಪ್ರೀತಿ ವ್ಯಕ್ತಪಡಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ದಾರಿ ಮೇಲೆ ಹೋಗ್ತಿದ್ದ ಜೋಡಿ ಏಕಾಏಕಿ ಲಿಪ್ ಲಾಕ್ ಮಾಡಿಕೊಳ್ತಾರೆ. ಇದು ಕೆಲವರಿಗೆ ನಾಚಿಕೆ ತಂದ್ರೆ ಮತ್ತೆ ಕೆಲವರು ಇವರದ್ದು ಎಂಥ ಪ್ರೀತಿಯಪ್ಪ ಅಂತಾ ರಾಗ ಎಳೆಯುತ್ತಾರೆ.

ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್ ಮಾಡುವ ಜೋಡಿ ಅಸಲಿಯತ್ತೇ ಬೇರೆ. ಅಧ್ಯಯನವೊಂದು ಸಾರ್ವಜನಿಕ ಪ್ರದೇಶದಲ್ಲಿ ಪ್ರೀತಿ ವ್ಯಕ್ತಪಡಿಸುವುದಕ್ಕೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದೆ. ಲಿಪ್ ಲಾಕ್, ಅಪ್ಪುಗೆ ಹೀಗೆ ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್ ಮಾಡುವ ಜೋಡಿ ಪ್ರೀತಿ ಹೆಚ್ಚಾಗಿ ಹೀಗೆ ಮಾಡಿಕೊಳ್ತಾರೆ ಎಂದುಕೊಂಡಿದ್ರೆ ನಿಮ್ಮ ಊಹೆ ತಪ್ಪು. ಹೆಚ್ಚಿನವರು ಶೋ ಆಫ್ ಗಾಗಿ ಹೀಗೆ ಮಾಡ್ತಾರಂತೆ. ವಿಶೇಷವೆಂದ್ರೆ ತಮ್ಮ ಇಮೇಜ್ ಗಾಗಿಯೂ ಹೆಚ್ಚಿನ ಯುವಜನತೆ ಹೀಗೆ ಮಾಡ್ತಾರೆಂದು ಅಧ್ಯಯನ ಹೇಳಿದೆ.

ಅಧ್ಯಯನದ ವರದಿ ಪ್ರಕಾರ ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್ ಮಾಡುವ ಜೋಡಿಗಳು ಹೆಚ್ಚಾಗಿ ಸ್ಕೂಲು, ಕಾಲೇಜಿಗೆ ಹೋಗುವವರಿರುತ್ತಾರೆ. ಶಾಲೆಯಲ್ಲಿ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳಲು ಅವರು ಹೀಗೆ ಮಾಡ್ತಾರಂತೆ. ಶೇಕಡಾ 37 ರಷ್ಟು ಹುಡುಗರಿದ್ರೆ ಶೇಕಡಾ 32ರಷ್ಟು ಹುಡುಗಿಯರು ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್ ಮಾಡಲು ಇಷ್ಟಪಡ್ತಾರಂತೆ.

ಶೇಕಡಾ 38ರಷ್ಟು ಪುರುಷರು ಸಾರ್ವಜನಿಕರ ಮುಂದೆ ಹೀರೋ ಆಗಲು ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್ ಮಾಡೋದಾಗಿ ಒಪ್ಪಿಕೊಂಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...