
ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್ ಮಾಡುವ ಜೋಡಿ ಅಸಲಿಯತ್ತೇ ಬೇರೆ. ಅಧ್ಯಯನವೊಂದು ಸಾರ್ವಜನಿಕ ಪ್ರದೇಶದಲ್ಲಿ ಪ್ರೀತಿ ವ್ಯಕ್ತಪಡಿಸುವುದಕ್ಕೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದೆ. ಲಿಪ್ ಲಾಕ್, ಅಪ್ಪುಗೆ ಹೀಗೆ ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್ ಮಾಡುವ ಜೋಡಿ ಪ್ರೀತಿ ಹೆಚ್ಚಾಗಿ ಹೀಗೆ ಮಾಡಿಕೊಳ್ತಾರೆ ಎಂದುಕೊಂಡಿದ್ರೆ ನಿಮ್ಮ ಊಹೆ ತಪ್ಪು. ಹೆಚ್ಚಿನವರು ಶೋ ಆಫ್ ಗಾಗಿ ಹೀಗೆ ಮಾಡ್ತಾರಂತೆ. ವಿಶೇಷವೆಂದ್ರೆ ತಮ್ಮ ಇಮೇಜ್ ಗಾಗಿಯೂ ಹೆಚ್ಚಿನ ಯುವಜನತೆ ಹೀಗೆ ಮಾಡ್ತಾರೆಂದು ಅಧ್ಯಯನ ಹೇಳಿದೆ.
ಅಧ್ಯಯನದ ವರದಿ ಪ್ರಕಾರ ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್ ಮಾಡುವ ಜೋಡಿಗಳು ಹೆಚ್ಚಾಗಿ ಸ್ಕೂಲು, ಕಾಲೇಜಿಗೆ ಹೋಗುವವರಿರುತ್ತಾರೆ. ಶಾಲೆಯಲ್ಲಿ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳಲು ಅವರು ಹೀಗೆ ಮಾಡ್ತಾರಂತೆ. ಶೇಕಡಾ 37 ರಷ್ಟು ಹುಡುಗರಿದ್ರೆ ಶೇಕಡಾ 32ರಷ್ಟು ಹುಡುಗಿಯರು ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್ ಮಾಡಲು ಇಷ್ಟಪಡ್ತಾರಂತೆ.
ಶೇಕಡಾ 38ರಷ್ಟು ಪುರುಷರು ಸಾರ್ವಜನಿಕರ ಮುಂದೆ ಹೀರೋ ಆಗಲು ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್ ಮಾಡೋದಾಗಿ ಒಪ್ಪಿಕೊಂಡಿದ್ದಾರೆ.