ನಿನ್ನೆ ನಡೆದ ಐತಿಹಾಸಿಕ ಸಮಾರಂಭದಲ್ಲಿ ವಿಶ್ವ ದಾಖಲೆಯ ಪುಸ್ತಕದಲ್ಲಿ 10 ಸಾವಿರ ಅಡಿ ಎತ್ತರದ ಅಟಲ್ ಸುರಂಗವನ್ನು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಎಂದು ಪ್ರಮಾಣೀಕರಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.
ಗಡಿ ರಸ್ತೆಗಳ ಸಂಸ್ಥೆಯ ಮಹಾನಿರ್ದೇಶಕ ಲೆಫ್ಟಿನಂಟ್ ಜನರಲ್ ರಾಜೀವ್ ಚೌಧರಿ ಮನಾಲಿಯನ್ನು ಲಾಹೌಲ್ – ಸ್ಪಿತಿಗೆ ಸಂಪರ್ಕಿಸುವ ಈ ಅದ್ಭುತ ಹೆದ್ದಾರಿಯನ್ನು ನಿರ್ಮಿಸಿದ ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ಕಾರ್ಯಕ್ಷಮತೆಯನ್ನು ಗುರುತಿಸಿ ಪ್ರಶಸ್ತಿ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ 2020ರ ಅಕ್ಟೋಬರ್ ಮೂರರಂದು ಅಟಲ್ ಸುರಂಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಮನಾಲಿ – ಲೇಹ್ ಹೆದ್ದಾರಿಯಲ್ಲಿರುವ ಅಟಲ್ ಸುರಂಗವು ರೋಹ್ಡಾಂಟ್ ಪಾಸ್ ಅಡಿಯಲ್ಲಿ ಸಾಗುವ 9.02 ಕಿಲೋಮೀಟರ್ ಸುರಂಗವಾಗಿದೆ. ಅಲ್ಲದೇ ಇದನ್ನು ಘನೀಕರಿಸುವ ತಾಪಮಾನದಂತಹ ಸವಾಲಿನ ಪರಿಸ್ಥಿತಿಯ ನಡೆಯುವೆಯೂ ನಿರ್ಮಿಸಲಾಗಿದೆ.
ಸುರಂಗ ನಿರ್ಮಾಣದ ಪ್ರಯುಕ್ತ ಚಳಿಗಾಲದ ಅವಧಿಯಲ್ಲಿ ಹೆದ್ದಾರಿಯನ್ನು ಆರು ತಿಂಗಳುಗಳ ಕಾಲ ಮುಚ್ಚಲಾಗಿತ್ತು. ಹೀಗಾಗಿ ಲಾಹೌಲ್ ಹಾಗೂ ಸ್ಪಿತಿ ಬರೋಬ್ಬರಿ ಆರು ತಿಂಗಳುಗಳ ಕಾಲ ಭಾರತದೊಂದಿಗೆ ಸಂಪರ್ಕವನ್ನು ಕಡಿದುಕೊಂಡಿತ್ತು.