alex Certify ಈ ಒಂದು ವಿಡಿಯೋ ಮಿಲಿಯನ್ ಪದಗಳಿಗೆ ಸಮ ಅಂದ್ರು ಉದ್ಯಮಿ ಆನಂದ್ ಮಹೀಂದ್ರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಒಂದು ವಿಡಿಯೋ ಮಿಲಿಯನ್ ಪದಗಳಿಗೆ ಸಮ ಅಂದ್ರು ಉದ್ಯಮಿ ಆನಂದ್ ಮಹೀಂದ್ರಾ..!

 ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಇವರು ಆಗಾಗ್ಗೆ ವೈರಲ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಕ್ರಿಸ್ಮಸ್ ಸಂಭ್ರಮದಲ್ಲಿ ಮಕ್ಕಳು ಕುಣಿಯುತ್ತಿರುವ ಸುಂದರ ದೃಶ್ಯದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಉದ್ಯಮಿ ಮಹೀಂದ್ರಾ ಹಂಚಿಕೊಂಡಿರುವ ವಿಡಿಯೋದಲ್ಲಿ ಮಕ್ಕಳ ಗುಂಪೊಂದು ನೃತ್ಯ ಮಾಡುವುದನ್ನು ಮತ್ತು ಹಾಡುವುದನ್ನು ತೋರಿಸುತ್ತದೆ. ಆದರೆ, ಅವರಲ್ಲಿ ಸರಿಯಾದ ಸಂಗೀತ ವಾದ್ಯವಿಲ್ಲ. ಬದಲಾಗಿ, ಬಕೆಟ್, ಮರದ ತುಂಡುಗಳಂತಹ ಶಬ್ಧಗಳನ್ನು ಮಾಡುವ ಹಲವಾರು ತಾತ್ಕಾಲಿಕ ವಸ್ತುಗಳನ್ನು ಉಪಯೋಗಿಸಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಸಮತಟ್ಟಾದ ಮರದ ತುಂಡಿನ ಮೇಲೆ ಚಿತ್ರಿಸಿದ ಕೀಬೋರ್ಡ್ ಅನ್ನು ಸಹ ಕಾಣಬಹುದು. ಬಹುತೇಕ ಮಂದಿ ತಮ್ಮಲ್ಲಿ ಸಾಧನಗಳಿಲ್ಲ ತಾವು ಹೇಗೆ ಪ್ರದರ್ಶನ ನೀಡುವುದು ಅಂತಾ ಚಿಂತೆ ಮಾಡುತ್ತಿರುತ್ತಾರೆ. ಆದರೆ, ಚಿಕ್ಕ-ಪುಟ್ಟ ವಿಷಯಗಳಲ್ಲೂ ಸಂತೋಷವನ್ನು ಕಾಣಬಹುದು ಅಂತಾ ಈ ಮಕ್ಕಳು ತೋರಿಸಿಕೊಟ್ಟಿದ್ದಾರೆ. ಸಿಕ್ಕ-ಸಿಕ್ಕ ವಸ್ತುಗಳನ್ನೇ ಸಾಧನಗಳನ್ನಾಗಿ ಮಾಡಿಕೊಂಡು ಅದ್ಭುತವಾಗಿ ಹಾಡಿದ್ದಲ್ಲದೆ, ಡಾನ್ಸ್ ಕೂಡ ಮಾಡಿದ್ದಾರೆ.

ಒಂದು ವಿಡಿಯೋ ಒಂದು ಮಿಲಿಯನ್ ಪದಗಳಿಗೆ ಯೋಗ್ಯವಾಗಿದೆ. ಸಂತೋಷದ ಕಾರ್ಖಾನೆಗೆ ಯಾವುದೇ ಬಂಡವಾಳದ ಅಗತ್ಯವಿಲ್ಲ. ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು ಎಂದು ಉದ್ಯಮಿ ಮಹೀಂದ್ರಾ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

ವೈರಲ್ ಆಗಿರೋ ವಿಡಿಯೋವು 55,000ಕ್ಕೂ ಹೆಚ್ಚು ವೀಕ್ಷಣೆಗಳು ಹಾಗೂ ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ನೆಟ್ಟಿಗರು ಕೂಡ ವಿಡಿಯೋವನ್ನು ಇಷ್ಟಪಟ್ಟಿದ್ದು, ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ.

— anand mahindra (@anandmahindra) December 25, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...