alex Certify ಈ ಉದ್ದೇಶಕ್ಕೆ ಬಳಸಲಾಗುತ್ತೆ ಶೂನ್ಯ ಮೌಲ್ಯದ ರೂಪಾಯಿ ನೋಟು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಉದ್ದೇಶಕ್ಕೆ ಬಳಸಲಾಗುತ್ತೆ ಶೂನ್ಯ ಮೌಲ್ಯದ ರೂಪಾಯಿ ನೋಟು..!

ಯಾರಾದರೂ ನಿಮಗೆ ಸೊನ್ನೆ ರೂಪಾಯಿ ನೋಟುಗಳನ್ನು ನೀಡಿದರೆ ನೀವು ಬಹುಶಃ ಅದನ್ನು ತಮಾಷೆಯಾಗಿ ತೆಗೆದುಕೊಂಡು ಇದನ್ನೊಂದು ನಕಲಿ ಕರೆನ್ಸಿ ಎಂದು ಹೇಳಬಹುದು. ಏಕೆಂದರೆ ನಾವು ಕೇವಲ 10, 20, 50, 100 , 500 ಹಾಗೂ 2000 ದ ಮುಖಬೆಲೆಯ ನೋಟುಗಳಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತೇವೆ.

ಆದರೆ ದೇಶದಲ್ಲಿರುವ ಸೊನ್ನೆ ರೂಪಾಯಿ ನೋಟು ಸಹ ಒಂದು ದೊಡ್ಡ ಉದ್ದೇಶವನ್ನು ಹೊಂದಿದೆ ಹಾಗೂ ಕೇವಲ ಒಂದು ಕಾಗದ ಮಾತ್ರವಲ್ಲ ಎಂದು ನಾವು ಹೇಳಿದರೆ ನೀವು ನಂಬೋಕೆ ತಯಾರಿದ್ದೀರೇ..? ಖಂಡಿತ ಇಲ್ಲ.

ಹೌದು..! ಈ ಶೂನ್ಯ ರೂಪಾಯಿ ನೋಟುಗಳನ್ನು ಭ್ರಷ್ಟಾಚಾರದ ವಿರುದ್ಧ ಬಳಕೆ ಮಾಡಲಾಗುತ್ತದೆ. ವ್ಯವಸ್ಥಿತ ರಾಜಕೀಯ ಭ್ರಷ್ಟಾಚಾರವನ್ನು ನಿಯಂತ್ರಿಸುವ ಅಥವಾ ಅದರ ವಿರುದ್ಧ ಹೋರಾಡುವ ಸಾಧನವಾಗಿ ಈ ನೋಟುಗಳನ್ನು ಬಳಕೆ ಮಾಡಲಾಗುತ್ತದೆ.

ದೇಶದಲ್ಲಿ ನೋಟುಗಳನ್ನು ಆರ್.​ಬಿ.ಐ. ಮುದ್ರಣ ಮಾಡುತ್ತದೆ. ಆದರೆ ಈ ಶೂನ್ಯ ನೋಟನ್ನು ಫಿಫ್ತ್​ ಪಿಲ್ಲರ್​ ಎಂಬ ಎನ್​ಜಿಓ 2007ರಲ್ಲಿ ಮುದ್ರಿಸಿ ಹೊರತಂದಿದೆ. ಲಂಚ ಪಡೆಯುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಸಮರ ಸಾರಲು ಈ ನೋಟುಗಳನ್ನು ಪರಿಚಯಿಸಲಾಗಿದೆ. ನೀವು ಯಾವುದೇ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ ವೇಳೆಯಲ್ಲಿ ನಿಮ್ಮ ಕೆಲಸ ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳಿದರೆ ನೀವು ಈ ಸೊನ್ನೆ ರೂಪಾಯಿ ನೋಟುಗಳನ್ನು ಪಾವತಿ ಮಾಡುವಂತೆ ಎನ್​ಜಿಓ ಹೇಳುತ್ತದೆ.

ತಮಿಳುನಾಡಿನ ಈ ಎನ್​.ಜಿ.ಓ. ಕನ್ನಡ,  ಹಿಂದಿ, ತೆಲುಗು ಹಾಗೂ ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಶೂನ್ಯ ನೋಟುಗಳನ್ನು ಮುದ್ರಣ ಮಾಡಿದೆ. ಈಗಾಗಲೇ ಲಕ್ಷಾಂತರ ನೋಟುಗಳನ್ನು ಮುದ್ರಿಸಲಾಗಿದ್ದು ಬಸ್​ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಈ ನೋಟುಗಳನ್ನು ಎನ್.​ಜಿ.ಓ. ಹಂಚುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...