ಹಾಸನ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ನಮ್ಮ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಯೋಜನೆಗಳಿಗೆ ತಡೆ ನೀಡಲಾಗಿದೆ. ಧ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಜಿಲ್ಲೆಯ ಎಲ್ಲಾ ಯೋಜನೆಗಳನ್ನು ತಡೆ ಹಿಡಿದರು. ಈಗ ಹೊಸ ಸಿಎಂ ಬೊಮ್ಮಾಯಿಯವರು ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ಶಾಸಕ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
BREAKING: ಅಮೆರಿಕ ವಿಜ್ಞಾನಿಗಳ ಮುಡಿಗೆ ʼನೊಬೆಲ್ʼ ಪ್ರಶಸ್ತಿ ಗೌರವ
ಹಾಸನದಲ್ಲಿ ಮಾತನಾಡಿದ ರೇವಣ್ಣ, ಯಡಿಯೂರಪ್ಪ ಸಿಎಂ ಆದಾಗ ನಮ್ಮ ಜಿಲ್ಲೆಯಲ್ಲಿ ಯಾವುದೇ ಯೋಜನೆಗಳು ಜಾರಿಯಾಗಲು ಬಿಡಲಿಲ್ಲ, ಹಾಸನಕ್ಕೆ ಮಂಜೂರಾಗಿದ್ದ ತೋಟಗಾರಿಕಾ ಕಾಲೇಜನ್ನು ತಡೆ ಹಿಡಿದರು. ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಿಲ್ಲ, ಈಗ ನೂತನ ಸಿಎಂ ಬೊಮ್ಮಾಯಿ ಏನು ಮಾಡುತ್ತಾರೆ ನೋಡಬೇಕು. ನಮ್ಮ ಜಿಲ್ಲೆಗೆ ನೀಡುವ ಅನುದಾನದಲ್ಲೂ ಸಮಸ್ಯೆ ಮಾಡಿದ್ದಾರೆ. ರಾಜ್ಯ ಸರ್ಕಾರ ಪಾಪರ್ ಆಗಿದೆ ಎಂದು ಹೇಳಿ ಬಿಡಲಿ, ಕಿಂಚಿತ್ತಾದರೂ ಸರ್ಕಾರಕ್ಕೆ ಗೌರವ ಇದ್ದರೆ ಹಳ್ಳಿ ಜನರ ಬಳಿ ಕ್ಷಮೆ ಯಾಚಿಸಬೇಕು ಎಂದು ಗುಡುಗಿದರು.
ನೆಹರು ಕಾಲದಲ್ಲಿದ್ದ ಕಾಂಗ್ರೆಸ್ ಈಗಿಲ್ಲ. ಈಗಿರುವುದು ಕೇವಲ ಡೋಂಗಿ ಕಾಂಗ್ರೆಸ್, ಬರೀ ಪ್ರಚಾರಕ್ಕಾಗಿ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. 60 ವರ್ಷಗಳ ಕಾಲ ಕಾಂಗ್ರೆಸ್ ದೇಶ ಆಳಿದೆ. ಆದರೆ ಯಾರಿಗೆ ಏನು ಸಹಾಯ ಮಾಡಿದೆ? ಅಲ್ಪಸಂಖ್ಯಾತರಿಂದ ಓಟ್ ಹಾಕಿಸಿಕೊಳ್ಳಲು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆದರೆ ಅವರಿಗೆ ಅವಕಾಶವನ್ನೂ ನೀಡಲ್ಲ. ಆದರೆ ಜೆಡಿಎಸ್ ಹಾಗಲ್ಲ, ಸಿಂದಗಿ ಉಪಚುನಾವಣೆಗೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದೇವೆ ಎಂದರು.
ಗಡಿ ನಿರ್ಬಂಧವಿದ್ದರೂ ವಧುವಿನ ಕುಟುಂಬಸ್ಥರು ಮದುವೆಯಲ್ಲಿ ಭಾಗಿಯಾಗಿದ್ದು ಹೇಗೆ ಗೊತ್ತಾ….?
ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ತಾಕತ್ತಿದ್ದರೆ ಒಕ್ಕಲಿಗರು, ಲಿಂಗಾಯಿತರನ್ನು ಹೊರತುಪಡಿಸಿ ಬೇರೆಯವರನ್ನು ಸಿಎಂ ಮಾಡಲಿ. ಹಿಂದುಳಿದ ವರ್ಗದವರನ್ನು ಸಿಎಂ ಮಾಡ್ತೀವಿ ಎಂದು ಘೋಷಿಸಲಿ ನೋಡೋಣ ಎಂದು ಸವಾಲು ಹಾಕಿದರು.