ಟೊಮೆಟೊ ರಸಭರಿತವಾದ ತರಕಾರಿ. ಇದರಿಂದ ಅನೇಕ ಬಗೆಯ ತಿನಿಸುಗಳನ್ನು ಮಾಡಬಹುದು. ಸಲಾಡ್, ಯೂಸ್ ಹೀಗೆ ಅನೇಕ ರೀತಿಯಲ್ಲಿ ನಾವು ಟೊಮೆಟೋವನ್ನು ಸೇವನೆ ಮಾಡುತ್ತೇವೆ. ಟೊಮೆಟೊದಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಹೇರಳವಾಗಿದೆ.
ಇದು ನಮ್ಮ ಚರ್ಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಟೊಮೆಟೊದಲ್ಲಿರುವ ಲೈಕೋಪೀನ್ ಎಂಬ ಅಂಶ ನಮ್ಮ ಚರ್ಮಕ್ಕೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನೂ ತೊಡೆದುಹಾಕಬಲ್ಲದು.
ಬ್ಯೂಟಿ ಪಾರ್ಲರ್‌ಗೆ ಅಲೆಯುವ ಬದಲು ಮನೆಯಲ್ಲೇ ಇರುವ ಒಂದೇ ಒಂದು ಟೊಮೆಟೋ ಬಳಸಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಟೊಮೆಟೋ ಟ್ಯಾನಿಂಗ್ ಮತ್ತು ಡೆಡ್ ಸ್ಕಿನ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದು ಮೈಬಣ್ಣವನ್ನು ಸುಧಾರಿಸುತ್ತದೆ ಮತ್ತು ಚರ್ಮಕ್ಕೆ ಹೊಳಪು ನೀಡುತ್ತದೆ. ಅರ್ಧ ಟೊಮೆಟೊ ತೆಗೆದುಕೊಂಡು ಅದನ್ನು ಕತ್ತರಿಸಿ. ಕೈಗಳಿಂದ ನಿಧಾನವಾಗಿ ಟೊಮೆಟೋವನ್ನು ಮುಖದ ಮೇಲೆ ಸ್ಕ್ರಬ್ ಮಾಡಿ.
ಇದಲ್ಲದೇ ಬೇಕಿದ್ದರೆ ಟೊಮೆಟೊ ರಸವನ್ನು ತೆಗೆದು ಮುಖಕ್ಕೆ ಹಚ್ಚಿಕೊಳ್ಳಬಹುದು. ಇದು ನಿಮ್ಮ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡಲು ಟೊಮೆಟೊ ಸಹಾಯ ಮಾಡುತ್ತದೆ. ಒಂದು ಬೌಲ್‌ನಲ್ಲಿ ಟೊಮೆಟೋ ರಸವನ್ನು ತೆಗೆದುಕೊಳ್ಳಿ. 2 ಚಿಟಿಕೆ ಅರಿಶಿನ ಮತ್ತು ಅರ್ಧ ಚಮಚ ಶ್ರೀಗಂಧದ ಪುಡಿಯನ್ನು ಅದಕ್ಕೆ ಸೇರಿಸಿ ಮಿಶ್ರಣ ಮಾಡಿ. ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ, ಚೆನ್ನಾಗಿ ಒಣಗಿಸಿ. ಒಣಗಿದ ನಂತರ ಮುಖವನ್ನು ತೊಳೆಯಿರಿ. ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಅನ್ನು ಅನ್ವಯಿಸಬೇಕು.
ಡೆಡ್ ಸ್ಕಿನ್ ತೆಗೆದುಹಾಕಲು ಟೊಮೆಟೊ ಸ್ಕ್ರಬ್ ಮಾಡಬಹುದು. ಒಂದು ಬೌಲ್‌ನಲ್ಲಿ ಟೊಮೆಟೊ ರಸ ಮತ್ತು ಸಕ್ಕರೆ ಮಿಶ್ರಣ ಮಾಡಿ. ನಂತರ ಈ ಸ್ಕ್ರಬ್ ಅನ್ನು ನಿಮ್ಮ ಬೆರಳುಗಳಲ್ಲಿ ತೆಗೆದುಕೊಂಡು ಮುಖದ ಮೇಲೆ ಹಚ್ಚಿ. ಮುಖವನ್ನು ಹಗುರವಾದ ಕೈಗಳಿಂದ ಮಸಾಜ್ ಮಾಡಿ. 2 ರಿಂದ 3 ನಿಮಿಷಗಳ ಕಾಲ ಮಸಾಜ್ ಮಾಡಿಕೊಂಡು ನಂತರ ಶುದ್ಧವಾದ ನೀರಿನಿಂದ ಮುಖ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡುತ್ತದೆ. ಡೆಡ್ ಸ್ಕಿನ್ ಸುಲಭವಾಗಿ ಹೊರಟು ಹೋಗುತ್ತದೆ.