ಸಿಹಿ ತಿನ್ನಬೇಕು ಅನಿಸ್ತಿದೆಯಾ…? ಹಾಗಿದ್ರೆ ಇಲ್ಲಿ ಒಂದು ರುಚಿಕರವಾದ ಸಿಹಿ ತಿನಿಸಿದೆ. ಒಮ್ಮೆ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ. ಮಾಡುವ ವಿಧಾನ ಕೂಡ ಸುಲಭವಿದೆ.
ಬೇಕಾಗುವ ಸಾಮಾಗ್ರಿಗಳು:
1 ಟೇಬಲ್ ಸ್ಪೂನ್ – ರೋಸ್ ಶರಬತ್, 5 – ಹನಿ-ರೋಸ್ ಎಸೆನ್ಸ್, 2 ಕಪ್ – ಹಾಲು, 1 ಟೇಬಲ್ ಸ್ಪೂನ್ – ಲಿಂಬೆಹಣ್ಣಿನ ರಸ, 1 ½ ಟೇಬಲ್ ಸ್ಪೂನ್ – ಸಕ್ಕರೆ ಪುಡಿ, 1 ಟೇಬಲ್ ಸ್ಪೂನ್ – ಹಾಲು, 1 ಟೇಬಲ್ ಸ್ಪೂನ್ – ಸಣ್ಣಗೆ ಕತ್ತರಿಸಿಕೊಂಡ ಬಾದಾಮಿ.
ಮಾಡುವ ವಿಧಾನ:
ಮೊದಲಿಗೆ 2 ಕಪ್ ಹಾಲನ್ನು ಒಂದು ದಪ್ಪ ತಳದ ಪಾತ್ರೆಗೆ ಹಾಕಿ 4 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಇದಕ್ಕೆ ಲಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಹಾಲು ಒಡೆಯುತ್ತದೆ. ನಂತರ ಇದನ್ನು ಸೋಸಿಕೊಳ್ಳಿ.
ನಂತರ ಇದರ ಮೇಲೆ ತಣ್ಣೀರು ಹಾಕಿ ಮತ್ತೊಮ್ಮೆ ನೀರನ್ನು ಶೋಧಿಸಿಕೊಂಡು ಅದರಲ್ಲಿರುವ ಪನ್ನೀರ್ ಅನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಸಕ್ಕರೆ ಪುಡಿ, ರೋಸ್ ಶರಬತ್ ಹಾಗೂ ರೋಸ್ ಎಸೆನ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ 1 ಟೇಬಲ್ ಸ್ಪೂನ್ ಹಾಲು ಸೇರಿಸಿ ತರಿ ತರಿಯಾಗಿ ರುಬ್ಬಿಕೊಂಡು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ಇದರಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಮತ್ತೆಗೆ ಒತ್ತಿಕೊಳ್ಳಿ. ಇದರ ಮಧ್ಯ ಭಾಗಕ್ಕೆ ಬಾದಾಮಿ ಚೂರುಗಳನ್ನು ಹಾಕಿ ಸರ್ವ್ ಮಾಡಿ.