ಹೆಚ್ಚಾಗಿ ಆಲೂಗಡ್ಡೆಯಿಂದ ಪಕೋಡಾ ತಯಾರಿಸುತ್ತಾರೆ. ಆದರೆ ಸೌತೆಕಾಯಿಯಿಂದ ಕೂಡ ರುಚಿಕರವಾದ ಪಕೋಡಾ ತಯಾರಿಸಬಹುದು. ಇದು ತುಂಬಾ ರುಚಿಕರವಾಗಿರುವುದಲ್ಲದೇ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.
ಹಾಗಾಗಿ ರುಚಿಕರವಾದ ಸೌತೆಕಾಯಿ ಪಕೋಡಾ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಬೇಕಾಗುವ ಸಾಮಾಗ್ರಿಗಳು :
1ಕಪ್ ಚೆಸ್ಟ್ ನಟ್, 2 ಚಮಚ ಕಲ್ಲುಪ್ಪು, ½ ಚಮಚ ಮೆಣಸಿನ ಪುಡಿ, ½ ಚಮಚ ದನಿಯಾ ಪುಡಿ, 1 ಚಮಚ ಹಸಿರು ಮೆಣಸಿನಕಾಯಿ, ಕತ್ತರಿಸಿದ ಸೌತೆಕಾಯಿ, ಎಣ್ಣೆ.
ವೈದ್ಯೆಯ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿದ ಕಾಂಪೌಂಡರ್..! ಹಣಕ್ಕೆ ಬೇಡಿಕೆ ಇಡಲು ಹೋಗಿ ಈಗ ಪೊಲೀಸರ ಅತಿಥಿ
ಮಾಡುವ ವಿಧಾನ : ಚೆಸ್ಟ್ ನಟ್, ಕಲ್ಲುಪ್ಪು, ಮೆಣಸಿನ ಪುಡಿ, ದನಿಯಾ ಪುಡಿ, ಹಸಿರು ಮೆಣಸಿನಕಾಯಿ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮಿಕ್ಸ್ ಮಾಡಿ ಹಿಟ್ಟನ್ನು ತಯಾರಿಸಿ. ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ. ಬಳಿಕ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸೌತೆಕಾಯಿ ಪೀಸ್ ಅನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ. ಕಂದು ಬಣ್ಣ ಬರುವವರೆಗೂ ಹುರಿಯಿರಿ. ಆಗ ಸೌತೆಕಾಯಿ ಪಕೋಡಾ ತಯಾರಾಗುತ್ತದೆ. ಇದನ್ನು ಚಟ್ನಿಯೊಂದಿಗೆ ಸವಿಯಬಹುದು.