ಸಿಹಿ ತಿನಿಸು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಅದರಲ್ಲಿಯೂ ಪಾಯಸ ಎಂದರೆ ಅನೇಕರಿಗೆ ಅಚ್ಚುಮೆಚ್ಚು. ಅದರಲ್ಲಿ ವಿಶೇಷವಾದ ಬೂದುಕುಂಬಳಕಾಯಿ ಪಾಯಸ ತಯಾರಿಸುವ ಕುರಿತ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಚೆನ್ನಾಗಿ ಗಟ್ಟಿಯಾಗಿರುವ ಬೂದುಕುಂಬಳಕಾಯಿ – 1 ಕೆ.ಜಿ., ಹಾಲು – ಅರ್ಧ ಲೀಟರ್, ಸಕ್ಕರೆ – 250 ಗ್ರಾಂ., ಗೋಡಂಬಿ, ದ್ರಾಕ್ಷಿ – 25 ಗ್ರಾಂ, ಸಿಪ್ಪೆ ತೆಗೆದ ಬಾದಾಮಿ – 25 ಗ್ರಾಂ, ತುಪ್ಪ – 25 ಗ್ರಾಂ.
ತಯಾರಿಸುವ ವಿಧಾನ:
ಮೊದಲಿಗೆ ಸಿಪ್ಪೆ ತೆಗೆದ ಬೂದುಕುಂಬಳಕಾಯಿಯನ್ನು ತುರಿದುಕೊಳ್ಳಿ. ಅದನ್ನು ಒಂದು ಪಾತ್ರೆಗೆ ಹಾಕಿಕೊಂಡು, ನಂತರದಲ್ಲಿ ಅದನ್ನು ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ.
5 ನಿಮಿಷದ ಬಳಿಕ ಹಾಲಿಗೆ ಸ್ವಲ್ಪ ನೀರು ಹಾಕಿಕೊಂಡು ಅದನ್ನು ಪಾತ್ರೆಗೆ ಹಾಕಿರಿ. ಕುಂಬಳಕಾಯಿ ತುರಿಯನ್ನು ಬೇಯಿಸಿಕೊಳ್ಳಿ. ಬಳಿಕ ಸಕ್ಕರೆ ಹಾಗೂ ತುಪ್ಪದಲ್ಲಿ ಕರಿದ ಗೋಡಂಬಿ, ದ್ರಾಕ್ಷಿಯನ್ನು ಹಾಕಿರಿ.
ಸಿಪ್ಪೆ ತೆಗೆದ ಬಾದಾಮಿಯನ್ನು ನುಣ್ಣಗೆ ಪುಡಿ ಮಾಡಿ ಬೆರೆಸಿರಿ. ಬೂದುಕುಂಬಳಕಾಯಿ ಪಾಯಸದ ರುಚಿಯನ್ನು ಸವಿಯಿರಿ.