alex Certify ಇಲ್ಲಿದೆ ಪಾದದ ಬಿರುಕಿಗೆ ‘ಮನೆ ಮದ್ದು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಪಾದದ ಬಿರುಕಿಗೆ ‘ಮನೆ ಮದ್ದು’

ಚಳಿಗಾಲದಲ್ಲಿ ಪಾದದ ರಕ್ಷಣೆ ಬಹಳ ಮುಖ್ಯ. ಬಿರುಕು ಬಿಟ್ಟ ಪಾದಗಳು ಯಮ ಹಿಂಸೆ ನೀಡುತ್ವೆ. ಚಳಿಗಾಲ ಮುಗಿದ್ರೆ ಸಾಕು ಎನ್ನುವ ಪರಿಸ್ಥಿತಿ ಕೆಲವರಿಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಪಾದಗಳ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಕೆಲಸದ ಒತ್ತಡದ ಮಧ್ಯೆಯೂ ಪಾದಗಳ ಆರೈಕೆ ಮಾಡಿಕೊಳ್ಳಬೇಕು.

ಸಮಯ- ಸಮಯಕ್ಕೆ ಪೆಡಿಕ್ಯೂರ್ ಮಾಡಿಕೊಳ್ಳಬೇಕು. ಅದಕ್ಕಾಗಿ ನೀವು ಬ್ಯೂಟಿ ಪಾರ್ಲರ್ ಗೆ ಹೋಗಬೇಕೆಂದೇನಿಲ್ಲ. ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದು. ಬಿಸಿ ನೀರಿಗೆ ಸ್ವಲ್ಪ ಶಾಂಪೂ ಬೆರೆಸಿ ಅದರಲ್ಲಿ ಪಾದವನ್ನಿಡಿ. ಇದರಿಂದ ಡೆಡ್ ಸ್ಕಿನ್ ದೂರವಾಗುವ ಜೊತೆಗೆ ಬಿರುಕಿನಲ್ಲಿ ಸಿಲುಕಿರುವ ಕೆಸರು ಹೋಗುತ್ತದೆ.

ಅರಿಶಿನ ಹಾಗೂ ಆಲಿವ್ ಆಯಿಲ್ ಒಡಕು ನಿವಾರಣೆಗೆ ಮನೆ ಮದ್ದು. ಅರಿಶಿನ ಪುಡಿಗೆ ಆಲಿವ್ ಆಯಿಲ್ ಸೇರಿಸಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ನಂತ್ರ ಅದನ್ನು ಒಡೆದ ಪಾದಗಳಿಗೆ ಹಚ್ಚಿಕೊಳ್ಳಿ. ಕೆಲವು ದಿನ ಹೀಗೆ ಮಾಡುತ್ತ ಬಂದಲ್ಲಿ ನಿಮ್ಮ ಪಾದ ಕೋಮಲ ಹಾಗೂ ಮೃದುವಾಗುತ್ತದೆ.

ವ್ಯಾಕ್ಸ್ ಮತ್ತು ತೆಂಗಿನೆಣ್ಣೆ ಸೇರಿಸಿ ಮಾಡಿದ ಮಿಶ್ರಣವನ್ನೂ ನೀವು ಪಾದಗಳಿಗೆ ಹಚ್ಚಬಹುದು. ಇದು ಪಾದಗಳ ಉರಿಯನ್ನು ಕಡಿಮೆ ಮಾಡುತ್ತದೆ. ವ್ಯಾಕ್ಸ್ ಹಾಗೂ ತೆಂಗಿನೆಣ್ಣೆಯನ್ನು ಸ್ವಲ್ಪ ಕುದಿಸಿ. ತಣ್ಣಗಾದ ನಂತ್ರ ರಾತ್ರಿ ಹಚ್ಚಿ ಮಲಗುವುದು ಬಹಳ ಒಳ್ಳೆಯದು.

ಗ್ಲಿಸರಿನ್ ಹಾಗೂ ರೋಸ್ ವಾಟರ್ ಮಿಶ್ರಣವನ್ನು ಸಿದ್ಧಮಾಡಿಕೊಳ್ಳಿ. ಒಂದು ಚಮಚ ಗ್ಲಿಸರಿನ್ ಗೆ 2 ಚಮಚ ರೋಸ್ ವಾಟರ್ ಅಳತೆಯಂತೆ ನಿಮಗೆ ಎಷ್ಟು ಬೇಕು ಅಷ್ಟು ಮಿಶ್ರಣವನ್ನು ಸಿದ್ಧಪಡಿಸಿ ಒಂದು ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ. ಪ್ರತಿದಿನ ರಾತ್ರಿ ಪಾದಗಳಿಗೆ ಹಚ್ಚಿ. ನಾಲ್ಕೈದು ದಿನದಲ್ಲಿ ಪರಿಣಾಮ ಕಾಣುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...