alex Certify ಇಲ್ಲಿದೆ ನೋಡಿ 2022ರ ಮಾರುತಿ ಸುಜುಕಿ ಬಲೆನೋ ಕಾರಿನ ವೈಶಿಷ್ಟ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನೋಡಿ 2022ರ ಮಾರುತಿ ಸುಜುಕಿ ಬಲೆನೋ ಕಾರಿನ ವೈಶಿಷ್ಟ್ಯ

Baleno new touchscreen.png

ಮಾರುತಿ ಸುಜುಕಿ ದೇಶದಲ್ಲಿ ಬಲೆನೋ ಫೇಸ್​ ಲಿಫ್ಟ್​ನ್ನು ಇದೇ ತಿಂಗಳ 23ನೇ ತಾರೀಖಿನಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು 2015ರಲ್ಲಿ ಬಿಡುಗಡೆಯಾದ ಪ್ರೀಮಿಯಂ ಹ್ಯಾಚ್​ಬ್ಯಾಕ್​ನ ಎರಡನೇ ಫೇಸ್​ಲಿಫ್ಟ್​ ಆಗಿದೆ. ಮೊದಲ ಫೇಸ್​ಲಿಫ್ಟ್​ನಲ್ಲಿ ಬಿಎಸ್​6 ಪವರ್​ ಪ್ಲಾಂಟ್​ ಜೊತೆಗೆ ಕೆಲವೇ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು.

ಆದರೆ ಫೆಬ್ರವರಿ 28ರಿಂದ ಲಾಂಚ್​ ಆಗಲಿರುವ ಫೇಸ್​ಲಿಫ್ಟ್​ನಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಈ ಬಾರಿ ಕಾರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಆಧುನಿಕ ಗ್ಯಾಜೆಟ್​​ಗಳನ್ನು ಬಳಕೆ ಮಾಡಲಾಗಿದೆ. ಹೊಸ ಬಲೆನೋ ಕಂಪನಿಯ ಸುಜುಕಿ ಕನೆಕ್ಟ್​ ಸೂಟ್​ನೊಂದಿಗೆ ಬರಲಿದೆ ಎಂದು ಮಾರುತಿ ಸುಜುಕಿ ಕಂಪನಿಯು ಬಹಿರಂಗಪಡಿಸಿದೆ. ಇದು 40 ಕ್ಕೂ ಹೆಚ್ಚು ಸಂಪರ್ಕಿತ ಕಾರು ವೈಶಿಷ್ಟ್ಯಗಳನ್ನು ನೀಡುತ್ತದೆ.

ಡ್ಯಾಶ್​ಬೋರ್ಡ್​ನ್ನು ಮರು ವಿನ್ಯಾಸಗೊಳಿಸಲಾಗಿದೆ. 9 ಇಂಚಿನ ಇನ್ಫೋಟೈನ್​ಮೆಂಟ್​ ಸಿಸ್ಟಂಗಳ ಜೊತೆ ಆಂಡ್ರಾಯ್ಡ್​ ಆಟೋ ಹಾಗೂ ಆ್ಯಪಲ್​ ಕಾರ್​ ಪ್ಲೇಯನ್ನು ನೀಡಲಾಗಿದೆ. ಇದರ ಜೊತೆಯಲ್ಲಿ 360 ಡಿಗ್ರಿ ಕ್ಯಾಮರಾ, ಅರ್ಕಾಮಿಸ್​ ಟ್ಯೂನ್ಸ್​ ಸೌಂಡ್​ ಸಿಸ್ಟಂ ಹಾಗೂ ವೈರ್​ಲೆಸ್​ ಫೋನ್​​ ಚಾರ್ಜರ್​ಗಳನ್ನು ಸೇರಿಸಲಾಗಿದೆ. ಡ್ಯಾಶ್​ಬೋರ್ಡ್​ನಲ್ಲಿ ಮೂರು ಟೋನ್​ ಫಿನಿಶ್​ ನೀಡಲಾಗಿದೆ. ಕಪ್ಪು, ಬೆಳ್ಳಿ ಹಾಗೂ ನೇರಳೆ ಬಣ್ಣವನ್ನು ಬಳಕೆ ಮಾಡಲಾಗಿದೆ. ಇನ್ನು ಸ್ವಿಫ್ಟ್​ ಕಾರಿನಂತೆಯೇ ಬಲೆನೋದಲ್ಲಿಯೂ ಸ್ಟೀರಿಂಗ್​ ವ್ಹೀಲ್​ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...