alex Certify ಇಲ್ಲಿದೆ ನೋಡಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ದಾಖಲಿಸದ ದೇಶಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನೋಡಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ದಾಖಲಿಸದ ದೇಶಗಳ ಪಟ್ಟಿ

ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವು ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿದೆ. ಆದರೆ ಈ ನಡುವೆ ಆಶ್ಚರ್ಯಕರ ವಿಚಾರ ಎಂಬಂತೆ ವಿಶ್ವದ ಕೆಲವು ರಾಷ್ಟ್ರಗಳು ಈ ಎರಡು ವರ್ಷಗಳಲ್ಲಿ ಒಂದೇ ಒಂದು ಕೋವಿಡ್​ ಕೇಸ್​ಗಳನ್ನು ವರದಿ ಮಾಡದೇ ಸಾಧನೆ ಮಾಡಿವೆ.

ಕೊರೊನಾ ವೈರಸ್​ನ ಶೂನ್ಯ ಕೇಸುಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯನ್ನು ವಿಶ್ವ ಆರೋಗ್ಯ ಸಂಸ್ಥೆ ರಿಲೀಸ್​ ಮಾಡಿದೆ. ಇದರಲ್ಲಿ ಬಹುತೇಕ ರಾಷ್ಟ್ರಗಳು ದ್ವೀಪಗಳಾಗಿವೆ ಹಾಗೂ ಇವೆಲ್ಲ ಬಹುತೇಕ ಪೆಸಿಫಿಕ್​ ಮತ್ತು ಅಟ್ಲಾಂಟಿಕ್​ ಸಮುದ್ರದ ಬಳಿಯೇ ಇವೆ.

ಮೈಕ್ರೋನೇಷಿಯಾ: ಈ ದೇಶವು 600 ಕ್ಕೂ ಹೆಚ್ಚು ದ್ವೀಪಗಳನ್ನು ಒಳಗೊಂಡಿರುವ ಪಶ್ಚಿಮ ಪೆಸಿಫಿಕ್ ಸಾಗರದಾದ್ಯಂತ ಹರಡಿದೆ. ಮೈಕ್ರೊನೇಶಿಯಾವು ಪೊನ್‌ಪೇ, ಕೊಸ್ರೇ, ಚುಕ್ ಮತ್ತು ಯಾಪ್​ಗಳೆಂಬ 4 ದ್ವೀಪ ರಾಜ್ಯಗಳಿಂದ ಮಾಡಲ್ಪಟ್ಟಿದೆ.

ನೌರು: ಓಷಿಯಾನಿಯಾದಲ್ಲಿರುವ ಈ ದೇಶವು ಹವಳದ ದಂಡೆ ಮತ್ತು ಬಿಳಿ-ಮರಳಿನ ಕಡಲತೀರಗಳನ್ನು ಹೊಂದಿದೆ. WHO ಪ್ರಕಾರ, ಪ್ರತಿ 100 ಜನರಿಗೆ ಸುಮಾರು 68 ಜನರು ಇಲ್ಲಿ ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿದ್ದಾರೆ.

ನಿಯು: ಇದು ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ಒಂದು ಸಣ್ಣ ದ್ವೀಪ ರಾಷ್ಟ್ರವಾಗಿದೆ. ಪ್ರತಿ 100 ರಲ್ಲಿ 79ಕ್ಕೂ ಅಧಿಕ ಜನರು ಇಲ್ಲಿ ಕೋವಿಡ್ ವಿರುದ್ಧ ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿದ್ದಾರೆ.

ಪಿಟ್ಕೈರ್ನ್ ದ್ವೀಪಗಳು: ಇದು ಪಿಟ್ಕೈರ್ನ್, ಹೆಂಡರ್ಸನ್, ಡ್ಯೂಸಿ ಮತ್ತು ಓನೋ ದ್ವೀಪಗಳನ್ನು ಒಳಗೊಂಡಿದೆ. ಇದು ದಕ್ಷಿಣ ಪೆಸಿಫಿಕ್‌ನಲ್ಲಿ ಅಕ್ಷಾಂಶ 25.04 ದಕ್ಷಿಣ ಮತ್ತು ರೇಖಾಂಶ 130.06 ಪಶ್ಚಿಮದಲ್ಲಿ ನೆಲೆಗೊಂಡಿರುವ ಒಂದು ಸಣ್ಣ ಜ್ವಾಲಾಮುಖಿ ಪ್ರದೇಶವಾಗಿದೆ. ಇಲ್ಲಿ 100ಕ್ಕೆ 74 ಜನರಿಗೆ ಸಂಪೂರ್ಣ ಲಸಿಕೆ ಹಾಕಲಾಗಿದೆ.

ಸೇಂಟ್ ಹೆಲೆನಾ: ನೆಪೋಲಿಯನ್ ಬೋನಪಾರ್ಟೆಯ ಗಡಿಪಾರು ಮತ್ತು ಮರಣದ ಸ್ಥಳವೆಂದು ಕರೆಯಲ್ಪಡುತ್ತದೆ, ಇದು ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ದೂರದ ಜ್ವಾಲಾಮುಖಿ ಪ್ರದೇಶವಾಗಿದೆ. ಪ್ರತಿ 100 ಜನರಿಗೆ 58.16 ಜನರು ಇಲ್ಲಿ ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿದ್ದಾರೆ ಎಂದು WHO ಮಾಹಿತಿ ನೀಡಿದೆ.

ಟೊಕೆಲಾವ್: ನ್ಯೂಜಿಲೆಂಡ್ ಬಳಿ ಇರುವ ಈ ಸ್ಥಳವು ಒಂದೇ ವಿಮಾನ ನಿಲ್ದಾಣವನ್ನು ಹೊಂದಿದೆ. ಇದು ಕೇವಲ 1,500 ಜನರ ಜನಸಂಖ್ಯೆಯನ್ನು ಹೊಂದಿದೆ.

ತವಾಲು: ಕೊರೊನಾ ಸಾಂಕ್ರಾಮಿಕ ಆರಂಭವಾಗುತ್ತಿದ್ದಂತೆ ತವಾಲು ತನ್ನ ಗಡಿಗಳನ್ನು ಬಂದ್​ ಮಾಡಿದೆ. ಇಲ್ಲಿ ಪ್ರತಿ 100 ಮಂದಿಯಲ್ಲಿ 50 ಮಂದಿ ಜನರು ಸಂಪೂರ್ಣ ಲಸಿಕೆಯನ್ನು ಸ್ವೀಕರಿಸಿದ್ದಾರೆ.

ಇನ್ನುಳಿದಂತೆ ತುರ್ಕಮೆನಿಸ್ತಾನ್​ ಹಾಗೂ ಉತ್ತರ ಕೊರಿಯಾ ಕೂಡ ಕೊರೊನಾ ವೈರಸ್​ ಮುಕ್ತ ರಾಷ್ಟ್ರಗಳೆಂದು ಪಟ್ಟಿ ಮಾಡಲಾಗಿದೆ. ಇಲ್ಲಿ ಕೂಡ ಇದುವರೆಗೆ ಅಧಿಕೃತವಾಗಿ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...