
ರಜೆ ಕಳೆಯಲು ಬೀಚ್ ಗಳಿಗಿಂತ ಉತ್ತಮವಾದ ಜಾಗ ಇನ್ನೊಂದಿಲ್ಲ. ಆದ್ರೆ ಓಡಿಶಾದ ಅತ್ಯಂತ ಸುಂದರವಾದ ಬೀಚ್ ಗಳ ಬಗ್ಗೆ ಬಹುತೇಕ ಜನರಿಗೆ ಗೊತ್ತಿಲ್ಲ. ಬಂಗಾಳ ಕೊಲ್ಲಿಯ ಸಮೀಪವಿರುವ ಓಡಿಶಾದ ಪುರಿ ಬೀಚ್ ಬಗ್ಗೆ ಬಹುತೇಕರಿಗೆ ತಿಳಿದಿದೆ. ಆದ್ರೆ ಉಳಿದ 6 ಅತ್ಯಂತ ರಮಣೀಯ ಬೀಚ್ ಗಳನ್ನು ನಾವ್ ನಿಮಗೆ ಪರಿಚಯ ಮಾಡಿಕೊಡುತ್ತೇವೆ.
ಬಲಿಘೈ : ಈ ಬೀಚ್ ಹೆಚ್ಚು ಜನಪ್ರಿಯವಾಗಿಲ್ಲ, ಪುರಿ ಬೀಚ್ ನಿಂದ ಕೇವಲ 8 ಕಿಮೀ ದೂರದಲ್ಲಿದೆ. ಈ ಬೀಚ್ ನ ಸ್ಪೆಷಾಲಿಟಿ ಅಂದ್ರೆ ಪ್ರಿಸ್ಟಿನಾ ಕ್ಯಾಶುರಿನಾ ಮರಗಳು. ಸುಂದರ ಆಮೆಗಳು ಮತ್ತು ವಲಸೆ ಹಕ್ಕಿಗಳನ್ನು ಕೂಡ ನೀವು ಕಣ್ತುಂಬಿಕೊಳ್ಳಬಹುದು.
ಚಂಡಿಪುರ್ : ಇದು ಓಡಿಶಾದ ಫೇಮಸ್ ಬೀಚ್ ಗಳಲ್ಲೊಂದು. ಬಲಸೋರ್ ರೈಲ್ವೆ ಸ್ಟೇಶನ್ ನಿಂದ 16 ಕಿಮೀ ದೂರದಲ್ಲಿದೆ. ಈ ಬೀಚ್ ಸಮೀಪದಲ್ಲೇ ಅರಡಿ ಮತ್ತು ಚಂದನೇಶ್ವರ್ ನಂತಹ ಪ್ರವಾಸಿ ತಾಣಗಳು ಕೂಡ ಇವೆ.
ಪರದೀಪ್ : ಭುವನೇಶ್ವರದಿಂದ 124 ಕಿಮೀ ದೂರದಲ್ಲಿರುವ ಈ ಬೀಚ್ ಪ್ರವಾಸಿಗರ ಸ್ವರ್ಗ. ಹೊಳೆಯುವ ನೀಲಿ ಬಣ್ಣದ ಸಮುದ್ರ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲೇ ದೊಡ್ಡ ಬಂದರನ್ನು ಕೂಡ ನಿರ್ಮಿಸಲಾಗಿದೆ.
ಗಹಿರ್ಮಾತಾ : ಈ ಬೀಚ್ ನಲ್ಲಿ ಕೂಡ ವಿಶಿಷ್ಟ ಆಮೆಗಳು ಕಣ್ಸೆಳೆಯುತ್ತವೆ. ಇದು ಓಡಿಶಾದ ಜನಪ್ರಿಯ ಭಿತರ್ಕಾನಿಕ ಕಾಡುಗಳ ಸಮೀಪದಲ್ಲಿದೆ. ಸಾಗರ ವನ್ಯಜೀವಿ ಅಭಯಾರಣ್ಯವನ್ನು ಕೂಡ ನೀವು ವೀಕ್ಷಿಸಬಹುದು.
ರಾಮ್ಚಂದಿ : ಖುಸಭದ್ರಾ ನದಿ ಹಾಗೂ ಬಂಗಾಳಕೊಲ್ಲಿಯ ಅಂಚಿನಲ್ಲಿ ಈ ಬೀಚ್ ಇದೆ. ಓಡಿಶಾದ ಪ್ರಸಿದ್ಧ ಕೋನಾರ್ಕ್ ದೇವಾಲಯದಿಂದ ಕೇವಲ 7 ಕಿಮೀ ದೂರದಲ್ಲಿದೆ. ಬೀಚ್ ನಲ್ಲೇ ರಾಮ್ ಚಂದಿ ದೇವಾಲಯವನ್ನೂ ನಿರ್ಮಾಣ ಮಾಡಲಾಗಿದೆ.
ಗೋಪಾಲ್ಪುರ: ಓಡಿಶಾದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳ ಇದು. ಬೆರ್ಹಾಂಪುರದಿಂದ 15 ಕಿಮೀ ದೂರದಲ್ಲಿದೆ. ಮತ್ತೆ ಮತ್ತೆ ನೋಡಬೇಕೆನಿಸುವಂತಹ ಸುಂದರ್ ಬೀಚ್ ಇದು.