ನಮ್ಮ ದೇಹದ ಆರೋಗ್ಯ ಕಾಪಾಡಿಕೊಂಡಷ್ಟೇ ನಮ್ಮ ಕಣ್ಣಿನ ಆರೋಗ್ಯವನ್ನ ಕಾಪಾಡಿಕೊಳ್ಳೋದು ಅಷ್ಟೇ ಮುಖ್ಯ. ಈಗಿನ ಮೊಬೈಲ್ ಯುಗ ಹಾಗೂ ತಪ್ಪು ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಲ್ಲೇ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತೆ.
ಸಮೀಪ ದೃಷ್ಟಿ ಅಥವಾ ದೂರ ದೃಷ್ಟಿ ದೋಷವನ್ನ ನಾವು ಕಡೆಗಣಿಸಿದ್ರೆ ಅದು ನಮ್ಮನ್ನ ಶಾಶ್ವತವಾಗಿ ಕುರುಡರನ್ನಾಗಿ ಮಾಡಬಲ್ಲ ದು. ಹೀಗಾಗಿ ಕಣ್ಣಿಗೆ ಕನ್ನಡಕ ಇಲ್ಲವೇ ಲೆನ್ಸ್ ಬಳಸಿ ಅಂತಾ ವೈದ್ಯರು ಸಲಹೆ ನೀಡ್ತಾರೆ. ಆದರೆ ನೀವು ಕೆಲ ಮನೆ ಮದ್ದುಗಳನ್ನ ಸೇವನೆ ಮಾಡಿದ್ರೆ ಕೆಲವೇ ದಿನಗಳಲ್ಲಿ ಕನ್ನಡಕ ಹಾಗೂ ಲೆನ್ಸ್ಗೆ ಗುಡ್ ಬೈ ಹೇಳಬಹುದು.
ಸೋಂಪು, ಬಾದಾಮಿ ಹಾಗೂ ಆರ್ಗಾನಿಕ್ ಸಕ್ಕರೆ ನಿಮ್ಮ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ವೆ. ಈ ಮೂರು ವಸ್ತುಗಳ ಮಿಶ್ರಣವನ್ನ ಉಪಯೋಗಿಸೋದ್ರಿಂದ ನಿಮ್ಮ ಕಣ್ಣಿನ ದೃಷ್ಟಿ ಇನ್ನಷ್ಟು ತೀಕ್ಷ್ಣವಾಗಲಿದೆ. 7 ಬಾದಾಮಿ, 5 ಗ್ರಾಂ ಆರ್ಗಾನಿಕ್ ಸಕ್ಕರೆ ಹಾಗೂ 5 ಗ್ರಾಂ ಸೋಂಪಿನಿಂದ ಈ ಮಿಶ್ರಣ ತಯಾರಿಸಬಹುದಾಗಿದೆ.
ಸೋಂಪು, ಸಕ್ಕರೆ ಹಾಗೂ ಬಾದಾಮಿಯನ್ನ ಮಿಕ್ಸ್ ಮಾಡಿ ರುಬ್ಬಿಕ್ಕೊಳ್ಳಿ. ಈ ಪೌಡರ್ನ್ನ ದಿನ ರಾತ್ರಿ ಮಲಗುವ ಮುನ್ನ ಕಣ್ಣಿನ ರೆಪ್ಪೆ ಮೇಲೆ ಹಾಲಿನ ಜೊತೆ ಮಿಕ್ಸ್ ಮಾಡಿ ಹಚ್ಚಿಕೊಳ್ಳಿ. 7 ದಿನ ಈ ರೀತಿ ಮಾಡೋದ್ರಿಂದ ನಿಮ್ಮ ಸಮಸ್ಯೆ ಪರಿಹಾರವಾಗಲಿದೆ.
ಒಂದು ವೇಳೆ ನಿಮಗೆ ಕಣ್ಣಿನ ದೃಷ್ಟಿ ಮಂದವಾಗ್ತಿದೆ ಅಂತಾ ಅನಿಸೋಕೆ ಶುರುವಾಯ್ತು ಅಂದ್ರೆ ನೀವು ಮನೆ ಮದ್ದನ್ನ ಮಾಡೋಕೆ ಶುರು ಮಾಡಬಹುದು. ಕೇವಲ 8 ಬಾದಾಮಿಯನ್ನ ಬಳಸಿ ನೀವು ಈ ಮನೆ ಮದ್ದನ್ನ ತಯಾರಿಸಬಹುದು. ರಾತ್ರಿ ನೆನೆಸಿಟ್ಟ ಬಾದಾಮಿಯನ್ನ ಪೇಸ್ಟ್ ಮಾಡಿಕೊಳ್ಳಿ. ಇದನ್ನ ನೀರಿನ ಜೊತೆ ಸೇರಿಸಿ ನಿತ್ಯ ಸೇವಿಸಿ. ಒಣ ದ್ರಾಕ್ಷಿ ಹಾಗೂ ಅಂಜೂರ ಕೂಡ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು . ಎರಡು ಅಂಜೂರ ಹಾಗೂ 15 ಒಣದ್ರಾಕ್ಷಿಯನ್ನ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನೋದ್ರಿಂದ ನಿಮ್ಮ ದೃಷ್ಟಿ ಸಮಸ್ಯೆ ವಾಸಿಯಾಗಲಿದೆ.