ಕೇಕ್ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಬೇಕರಿಗೆ ಹೋಗಿ ತಿನ್ನುವುದಕ್ಕೆ ಈಗ ಆಗುವುದಿಲ್ಲ. ಹಾಗಾಗಿ ಮನೆಯಲ್ಲಿ ಸುಲಭವಾಗಿ ಕೇಕ್ ಮಾಡಿಕೊಂಡು ಸವಿಯಿರಿ.
ಒಂದು ಮಿಕ್ಸಿ ಜಾರಿಗೆ 3 ಪ್ಯಾಕ್ ಒರಿಯೋ ಬಿಸ್ಕೇಟ್ ಅನ್ನು ಒಡೆದು ಹಾಕಿ ಪುಡಿ ಮಾಡಿಕೊಳ್ಳಿ. ಇದನ್ನು ಒಂದು ಬೌಲ್ ಗೆ ತೆಗೆದಿಟ್ಟುಕೊಳ್ಳಿ. ನಂತರ ಅರ್ಧ ಕಪ್ ಹಾಲು ತೆಗೆದುಕೊಂಡು ಬಿಸ್ಕೇಟ್ ಪುಡಿಗೆ ಸ್ವಲ್ಪ ಸ್ವಲ್ಪವೇ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಇದು ದೋಸೆ ಹಿಟ್ಟಿನ ಹದಕ್ಕೆ ಬರುವವರೆಗೆ ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ನಿಮಗೆ ಸಕ್ಕರೆ ಬೇಕಿದ್ದರೆ ¼ ಕಪ್ ಸಕ್ಕರೆ ಸೇರಿಸಿಕೊಳ್ಳಿ. 1 ಟೀ ಸ್ಪೂನ್ ಬೇಕಿಂಗ್ ಪೌಡರ್ ಹಾಕಿಕೊಳ್ಳಿ. 1 ಟೀ ಸ್ಪೂನ್ ಎಣ್ಣೆ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಕುಕ್ಕರ್ ಇಟ್ಟು ಅದರ ಗ್ಯಾಸ್ಕೆಟ್ ವಿಷಲ್ ಎಲ್ಲಾ ತೆಗೆಯಿರಿ.
ನಂತರ ಅದರ ಕೆಳಗಡೆ 1 ಕಪ್ ಪುಡಿ ಉಪ್ಪು ಹಾಕಿ ಪ್ರಿ ಹೀಟ್ ಮಾಡಿಕೊಳ್ಳಿ. ನಂತರ ಕೇಕ್ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಂಡು ಆ ಪಾತ್ರೆಯನ್ನು ಕುಕ್ಕರ್ ಒಳಗಡೆ ಇಟ್ಟು 40 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ.