ಭಾರತೀಯ ಕೈಗಾರಿಕೋದ್ಯಮಿ ಗೌತಮ್ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಲೂಮ್ಬರ್ಗ್ ಬಿಲಿಯೇನರ್ ವರದಿ ಮಾಡಿರುವ ಟಾಪ್ 10 ಏಷ್ಯಾದ ಶ್ರೀಮಂತರ ಪಟ್ಟಿ ಇಲ್ಲಿದೆ ನೋಡಿ :
ಗೌತಮ್ ಅದಾನಿ : ಭಾರತದ ಕೋಟ್ಯಾಧಿಪತಿ ಕೈಗಾರಿಕೋದ್ಯಮಿ ಗೌತಮ್ ಅದಾನಿ, ಮುಕೇಶ್ ಅಂಬಾನಿಯವರನ್ನೂ ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಂದರು ಅಭಿವೃದ್ಧಿ ಹಾಗೂ ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿರುವ ಅಹಮದಾಬಾದ್ ಮೂಲದ ಬಹುರಾಷ್ಟ್ರೀಯ ಅದಾನಿ ಗ್ರೂಪ್ನ ಅಧ್ಯಕ್ಷ ಹಾಗೂ ಸಂಸ್ಥಾಪಕರಾಗಿದ್ದಾರೆ. ಬ್ಲೂಮ್ಬರ್ಗ್ ಬಿಲಿಯೇನರ್ಸ್ ಇಂಡೆಕ್ಸ್ ವರದಿಯ ಪ್ರಕಾರ 59 ವರ್ಷದ ಅದಾನಿ ನಿವ್ವಳ ಮೌಲ್ಯವು 88.5 ಶತಕೋಟಿ ಡಾಲರ್ ಆಗಿದೆ.
ಮುಕೇಶ್ ಅಂಬಾನಿ : ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ನಿವ್ವಳ ಮೌಲ್ಯವು 87.9 ಶತಕೋಟಿ ಡಾಲರ್ ಆಗಿದ್ದು ಈ ಮೂಲಕ ಏಷ್ಯಾದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಅಂಬಾನಿ ದೇಶದ ಹಾಗೂ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ್ದರು. ಪ್ರಸ್ತುತ ಗೌತಮ್ ಅದಾನಿ, ಮುಕೇಶ್ ಅಂಬಾನಿಗಿಂತ 2.2 ಶತಕೋಟಿ ಡಾಲರ್ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.
ಝಾಂಗ್ ಶಾನ್ಶನ್ : ಬಾಟಲ್ ವಾಟರ್ ಕಿಂಗ್ ಎಂದೇ ಫೇಮಸ್ ಆಗಿರುವ ಝಾಂಗ್ ಶಾನ್ಶನ್ 75.7 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಏಷ್ಯಾದ ಮೂರನೇ ಅತೀದೊಡ್ಡ ಶ್ರೀಮಂತ ಎನಿಸಿದ್ದಾರೆ. ವಾಟರ್ ಬಾಟಲಿ ಕಂಪನಿಯಾದ ನೋಂಗ್ ಫು ಸ್ಟ್ರಿಂಗ್ನ ಅಧ್ಯಕ್ಷರಾದ ಶಾನ್ಶನ್ ಸೆಪ್ಟೆಂಬರ್ 2020 ರಲ್ಲಿ ಹಾಂಗ್ ಕಾಂಗ್‌ನಲ್ಲಿ ತನ್ನ ಷೇರುಗಳನ್ನು ಪಟ್ಟಿಮಾಡಿದ್ದಾರೆ.
ಜಾಂಗ್ ಯಿಮಿಂಗ್ : ಟಿಕ್ ಟಾಕ್‌ನ ಸಂಸ್ಥಾಪಕರಾದ 39 ವರ್ಷದ ಚೀನಾದ ಬಿಲಿಯನೇರ್ ಜಾಂಗ್ ಯಿಮಿಂಗ್ ಅವರು ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದಾರೆ ಮತ್ತು 44.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಝೆಂಗ್ ಯುಕುನ್ : CATL ನ ಸಂಸ್ಥಾಪಕ ಝೆಂಗ್ ಯುಕುನ್ (ಚೀನಾ) ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ, 48.7 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಮಾ ಹುವಾಟೆಂಗ್ : ಚೀನಾದ ಕೋಟ್ಯಾಧಿಪತಿ ಮಾ ಹುವಾಟೆಂಗ್ 46.6 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಏಷ್ಯಾದ ಆರನೇ ಅತೀ ದೊಡ್ಡ ಶ್ರೀಮಂತರಾಗಿದ್ದಾರೆ.
ಜಾಕ್ ಮಾ : ಚೀನಾದ ಜಾಕ್ ಮಾ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಇವರು 35.9 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಲಿ ಕಾ-ಶಿಂಗ್ : ಹಾಂಕಾಂಗ್‌ನ ಉದ್ಯಮಿ ಲಿ ಕಾ ಶಿಂಗ್ 35.8 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದುವ ಮೂಲಕ ಏಷ್ಯಾದ ಎಂಟನೇ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.
ಲೀ ಶಾವ್ ಕೀ : ಸನ್ ಹಂಗ್ ಕೈಯ ಸಹ-ಸಂಸ್ಥಾಪಕ, ಹಾಂಕಾಂಗ್‌ನ ಲೀ ಶಾವ್ ಕೀ $ 34.1 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಮತ್ತು ಏಷ್ಯಾದ ಒಂಬತ್ತನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಹೀ ಕ್ಸಿಯಾಂಗ್‌ಜಿಯಾನ್ : ಅಪ್ಲೈಯನ್ಸ್ ದೈತ್ಯ ಮಿಡಿಯಾದ ಸಂಸ್ಥಾಪಕ, ಚೀನಾದ ಹೀ ಕ್ಸಿಯಾಂಗ್‌ಜಿಯಾನ್ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇವರು 33.1 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.