ಇಡ್ಲಿ ಸಾಂಬಾರಿನ ಜತೆಗೆ ಉದ್ದಿನ ವಡೆ ಇದ್ದರೆ ತಿನ್ನಲು ರುಚಿಕರವಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಉದ್ದಿನ ವಡೆ ವಿಧಾನ ಇದೆ ನೋಡಿ.
1 ಕಪ್ ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು 2 ಗಂಟೆಗಳ ಕಾಲ ನೆನೆಹಾಕಿ. ನಂತರ ಈ ಉದ್ದಿನಬೇಳೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಂಡು ಒಂದು ಬೌಲ್ ಗೆ ತೆಗೆದುಕೊಳ್ಳಿ.
ನಂತರ 2 ಟೇಬಲ್ ಸ್ಪೂನ್ ನಷ್ಟು ತೆಂಗಿನಕಾಯಿ ಪೀಸ್ ಚಿಕ್ಕದಾಗಿ ಕತ್ತರಿಸಿಕೊಂಡಿದ್ದು, 1 ಚಮಚದಷ್ಟು ಶುಂಠಿ ತುರಿ, ಹಸಿಮೆಣಸು-2 ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದು, ಕರಿಬೇವು-5 ಎಸಳು ಸಣ್ಣಗೆ ಕತ್ತರಿಸಿಕೊಂಡಿದ್ದನ್ನೆಲ್ಲಾ ರುಬ್ಬಿಟ್ಟುಕೊಂಡಿದ್ದು ಉದ್ದಿನಬೇಳೆಯ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಉಪ್ಪು ಸೇರಿಸಿ ಮಿಶ್ರಣ ಮಾಡಿ. ನಂತರ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಬಿಸಿಗೆ ಇಟ್ಟು ಸ್ವಲ್ಪ ಸ್ವಲ್ಪವೇ ಹಿಟ್ಟು ತೆಗೆದುಕೊಂಡು ಮಧ್ಯೆ ತೂತು ಮಾಡಿ ಎಣ್ಣೆಯಲ್ಲಿ ಕರಿಯಿರಿ.