ಟೊಮೆಟೊ -5, ಸಾಸಿವೆ 2 ಟೀ ಚಮಚ, ಉದ್ದಿನಬೇಳೆ -2 ಟೇಬಲ್ ಚಮಚ, ಕಡಲೆಬೇಳೆ -2 ಟೇಬಲ್ ಚಮಚ, ತೊಗರಿಬೇಳೆ -3 ಟೇಬಲ್ ಸ್ಪೂನ್. ½ ಟೀ ಸ್ಪೂನ್ -ಮೆಂತೆಕಾಳು, 1ಟೀ ಸ್ಪೂನ್ -ಜೀರಿಗೆ, 1 ಟೇಬಲ್ ಸ್ಪೂನ್ ನಷ್ಟು ಕೊತ್ತಂಬರಿಕಾಳು, 1 ಟೀ ಸ್ಪೂನ್ -ಕಾಳು ಮೆಣಸು, 6-8 ಬ್ಯಾಡಗಿ ಮೆಣಸು, ಅರಿಶಿನ -1 ಟೀ ಸ್ಪೂನ್, ಇಂಗು -1 ಟೀ ಸ್ಪೂನ್, ನೆಲ್ಲಿಕಾಯಿ ಗಾತ್ರದ ಹುಳಿ, 1 ಟೀ ಸ್ಪೂನ್ -ಬೆಲ್ಲ. ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, ಉಪ್ಪು -ರುಚಿಗೆ ತಕ್ಕಷ್ಟು. ಸ್ವಲ್ಪ -ಎಣ್ಣೆ.
ಮಾಡುವ ವಿಧಾನ:
ಮೊದಲು ಇಡೀ ಟೊಮೆಟೊ ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಿ. ಟೊಮೆಟೊ ಬೆಂದ ನಂತರ ಗ್ಯಾಸ್ ಆಫ್ ಮಾಡಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದು ಬಿಸಿಯಾದ ಮೇಲೆ ಸ್ವಲ್ಪ ತೆಂಗಿನೆಣ್ಣೆ ಹಾಕಿ ನಂತರ ಅದಕ್ಕೆ ಬ್ಯಾಡಗಿ ಮೆಣಸು ಹಾಕಿ ಹುರಿಯಿರಿ.
ನಂತರ ಕಡಲೆಬೇಳೆ ಹಾಕಿ ಅದು ತುಸು ಕೆಂಪಗಾದ ಮೇಲೆ ತೊಗರಿಬೇಳೆ ಹಾಕಿ ಹುರಿಯಿರಿ, ನಂತರ ಮೆಂತೆಕಾಳು ಹಾಕಿ. ನಂತರ 1 ಟೇಬಲ್ ಚಮಚ ಉದ್ದಿನ ಬೇಳೆ ಹಾಕಿ, 1 ಟೀ ಸ್ಪೂನ್ ಸಾಸಿವೆ ಹಾಕಿ, ಸ್ವಲ್ಪ ಕರಿಬೇವು ಹಾಕಿ ಅದು ಬಿಸಿಯಾಗುತ್ತಲೆ ಕಾಳುಮೆಣಸು, ಕೊತ್ತಂಬರಿ, ಜೀರಿಗೆ ಹಾಕಿ ಫ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ.
ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಬೇಯಿಸಿಟ್ಟುಕೊಂಡ ಟೊಮೆಟೊ, ಹುಣಸೆಹಣ್ಣು ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಒಂದು ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದು ಬಿಸಿಯಾಗುತ್ತಲೇ ಎಣ್ಣೆ ಹಾಕಿ ನಂತರ ಉಳಿದ ಸಾಸಿವೆ, ಉದ್ದಿನಬೇಳೆ, ಕರಿಬೇವು, ಇಂಗು ಹಾಕಿ 2 ನಿಮಿಷ ಕೈಯಾಡಿಸಿ.
ನಂತರ ರುಬ್ಬಿಟ್ಟುಕೊಂಡ ಮಸಾಲೆಯನ್ನು ಸೇರಿಸಿ 2 ನಿಮಿಷಗಳ ಕಾಲ ಬೇಯಿಸಿ. ನಂತರ ನಿಮಗೆ ಬೇಕಾದಷ್ಟು ನೀರು ಹಾಕಿ. ನಂತರ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ನಂತರ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೊಮ್ಮೆ ಕುದಿಸಿ.