ಗುಲ್ಕನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಜೊತಗೆ ಕಣ್ಣಿನ ದೃಷ್ಟಿ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ತ್ವಚೆಗೂ ಕೂಡ ಇದು ತುಂಬಾ ಒಳ್ಳೆಯದು. ಇದನ್ನು ಉಪಯೋಗಿಸಿಕೊಂಡು ರುಚಿಕರವಾದ ಗುಲ್ಕನ್ ಫಿರ್ನಿ ಮಾಡಬಹುದು. ಇದು ತುಂಬಾ ರುಚಿಕರವಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
½ ಕಪ್ – ಭಾಸುಮತಿ ಅಕ್ಕಿ, ನೀರು – 1/2 ಕಪ್, ಹಾಲು – 4 ಕಪ್, ಸಕ್ಕರೆ – 1/2 ಕಪ್, ಗುಲ್ಕನ್ – 1/2 ಕಪ್, ರೋಸ್ ಎಸೆನ್ಸ್ – 3 ಹನಿ, ಪಿಂಕ್ ಫುಡ್ ಕಲರ್ – 4 ಹನಿ.
ಮಾಡುವ ವಿಧಾನ:
ಮೊದಲಿಗೆ ಅಕ್ಕಿಯನ್ನು ತೊಳೆದು 2 ಗಂಟೆಗಳ ಕಾಲ ನೆನೆ ಹಾಕಿ. ನಂತರ ಇದನ್ನು ಮಿಕ್ಸಿಗೆ ಹಾಕಿ ನೀರು ಸೇರಿಸಿಕೊಂಡು ನಯವಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಪ್ಯಾನ್ ಗೆ ಹಾಕಿಕೊಂಡು ಅದಕ್ಕೆ ಹಾಲು ಸೇರಿಸಿ ಗ್ಯಾಸ್ ಮೇಲೆ ಇಟ್ಟು ಅನ್ನ ಬೇಯುವವರಗೆ ಬೇಯಿಸಿಕೊಳ್ಳಿ.
ಇದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ನಂತರ ಗುಲ್ಕನ್ ಸೇರಿಸಿ ಮಿಕ್ಸ್ ಮಾಡಿ ರೋಸ್ ಎಸೆನ್ಸ್, ಪಿಂಕ್ ಫುಡ್ ಕಲರ್ ಸೇರಿಸಿ ಫ್ರಿಡ್ಜ್ ನಲ್ಲಿ ಸ್ವಲ್ಪ ಹೊತ್ತು ಇಟ್ಟು ಸರ್ವ್ ಮಾಡಿ.