ಸಲಾಡ್ ಎಂದರೆ ತೂಕ ಇಳಿಸಿಕೊಳ್ಳುವವರಿಗೆ ತುಂಬಾ ಇಷ್ಟ. ಹೊಟ್ಟೆ ತುಂಬಾ ಅನ್ನ ಬೇಡ ಎಂದುಕೊಳ್ಳುವವರು ಈ ಕಾಬೂಲ್ ಕಡಲೆ ಸಲಾಡ್ ಮಾಡಿಕೊಂಡು ಸವಿಯಿರಿ. ನಾರಿನಾಂಶವು ಜಾಸ್ತಿ ಸಿಗುತ್ತದೆ ದೇಹಕ್ಕೂ ತುಂಬಾ ಒಳ್ಳೆಯದು.
ಬೇಕಾಗುವ ಸಾಮಗ್ರಿ:
1 ಕಪ್ ಕಾಬೂಲ್ ಕಡಲೆ, 2 ಸಣ್ಣಗೆ ಹಚ್ಚಿದ ಟೊಮೆಟೊ, 1-ಸೌತೆಕಾಯಿ, 1-ರೆಡ್ ಬೆಲ್ ಪೆಪ್ಪರ್, ½ ಕಪ್ ಸಣ್ಣಗೆ ಹಚ್ಚಿದ ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 2 ಟೇಬಲ್ ಸ್ಪೂನ್-ಆಲಿವ್ ಎಣ್ಣೆ, 3 ಸ್ಪೂನ್-ಲಿಂಬೆಹಣ್ಣಿನ ರಸ, 1 ಟೀ ಸ್ಪೂನ್- ಉಪ್ಪು, ¼ ಟೀ ಸ್ಪೂನ್- ಕಾಳುಮೆಣಸಿನ ಪುಡಿ.
ಮಾಡುವ ವಿಧಾನ:
ಮೊದಲಿಗೆ ಕಾಬೂಲ್ ಕಡಲೆಕಾಳನ್ನು ಚೆನ್ನಾಗಿ ತೊಳೆದು 6 ಗಂಟೆಗಳ ಕಾಲ ನೆನೆಸಿಡಿ. (ನೆನೆಸಿದ ಕಾಳು ಇಷ್ಟಪಡದವರು ಕುಕ್ಕರ್ ನಲ್ಲಿ 1 ವಿಷಲ್ ಬೇಕಾದರೆ ಕೂಗಿಸಿಕೊಳ್ಳಿ) ಒಂದು ದೊಡ್ಡ ಬೌಲ್ ಗೆ ನೆನೆಸಿದ ಕಡಲೆಕಾಳು, ಸಣ್ಣಗೆ ಹಚ್ಚಿದ ಟೊಮೆಟೊ, ಈರುಳ್ಳಿ, ಸೌತೆಕಾಯಿ ಪೀಸ್, ರೆಡ್ ಬೆಲ್ ಪೆಪ್ಪರ್, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಇದಕ್ಕೆ ಆಲಿವ್ ಎಣ್ಣೆ, ಲಿಂಬೆಹಣ್ಣಿನ ರಸ, ಉಪ್ಪು, ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸವಿಯಿರಿ. ಮಾಡಿದ ತಕ್ಷಣ ಇದನ್ನು ತಿಂದರೆ ಚೆನ್ನಾಗಿರುತ್ತದೆ.