ಅಡುಗೆಗೆ ಬಳಸುವ ಲವಂಗ ವಿವಿಧ ಔಷಧಿ ಗುಣಗಳನ್ನು ಹೊಂದಿದೆ. ಲವಂಗವನ್ನು ಅಡುಗೆಗೆ, ಹಲ್ಲುನೋವಿಗೆ ಬಳಸುವುದನ್ನು ಮಾತ್ರ ತಿಳಿದಿದ್ದೇವೆ.
ಅತಿಯಾಗಿ ಸುಸ್ತಾದಾಗ ಸೋಮಾರಿತನ ಉಂಟಾಗುತ್ತದೆ, ಇದು ಆರೋಗ್ಯದ ಮೇಲೆ ಹಾನಿ ಮಾಡುತ್ತದೆ. ಈ ಸಮಯದಲ್ಲಿ ಲವಂಗದ ಎಣ್ಣೆಯನ್ನು ಇತರ ಆರೋಗ್ಯಕರ ಪಾನಿಯದೊಂದಿಗೆ ಒಂದು ಹನಿ ಸೇರಿಸಿ ಸೇವಿಸುವುದರಿಂದ ಸುಸ್ತು ದೂರವಾಗುತ್ತದೆ ಮತ್ತು ನಮ್ಮಲ್ಲಿ ಚೈತನ್ಯ ಮೂಡುತ್ತದೆ.
ಲವಂಗದ ಎಣ್ಣೆಯನ್ನು ನೀರಿಗೆ ಬೆರೆಸಿ ಮನೆಯ ತುಂಬಾ ಚಿಮುಕಿಸುವುದರಿಂದ ಮನೆ ಸುಗಂಧ ಭರಿತವಾಗಿ ಇರುತ್ತದೆ.
ಅಡುಗೆ ಮನೆಯಲ್ಲಿ ಕೆಟ್ಟ ವಾಸನೆ ತುಂಬಿದ್ದರೆ ನೀರಿನಲ್ಲಿ ಲವಂಗ ಹಾಕಿ ಕುದಿಸಿ ನೀರು ಆವಿ ಮಾಡಬೇಕು. ಇದರಿಂದ ದುರ್ಗಂಧ ದೂರವಾಗುತ್ತದೆ. ತೆಗೆದಿಡುವ ಪ್ಲಾಸ್ಕ್ ನೊಳಗೆ ಲವಂಗ ಹಾಕಿಟ್ಟರೆ ತೆರೆಯುವಾಗ ಸುವಾಸನೆ ಬೀರುತ್ತದೆ.