alex Certify ಇಯರ್‌ಫೋನ್ ವೈರ್‌ಗಳು ಒಂದಕ್ಕೊಂದು ಗಂಟು ಬೀಳುವುದ್ಯಾಕೆ……? ಇದರ ಹಿಂದಿದೆ ವೈಜ್ಞಾನಿಕ ಕಾರಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಯರ್‌ಫೋನ್ ವೈರ್‌ಗಳು ಒಂದಕ್ಕೊಂದು ಗಂಟು ಬೀಳುವುದ್ಯಾಕೆ……? ಇದರ ಹಿಂದಿದೆ ವೈಜ್ಞಾನಿಕ ಕಾರಣ….!

ಸಾಮಾನ್ಯವಾಗಿ ಎಲ್ಲರ ಬಳಿಯೂ ಈಗ ಇಯರ್‌ ಫೋನ್‌ ಇದ್ದೇ ಇರುತ್ತದೆ. ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌ ಏನೇ ಬಳಸುವುದಾದ್ರೂ ಇಯರ್‌ ಫೋನ್‌ ಕೂಡ ಜೊತೆಗಿಟ್ಟುಕೊಳ್ತಾರೆ. ಈ ಇಯರ್‌ಫೋನ್‌ಗಳ ಸಾಮಾನ್ಯ ಸಮಸ್ಯೆ ಅಂದರೆ ಇದನ್ನು ಜೇಬಿನಲ್ಲಿಡಿ ಅಥವಾ ಬ್ಯಾಗ್‌ನಲ್ಲಿ ಇರಿಸಿ, ಇದರ ವೈರ್‌ಗಳು ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳುತ್ತವೆ.

ಅದನ್ನು ಬೇರ್ಪಡಿಸುವುದು ಬಹುದೊಡ್ಡ ಸವಾಲು, ತಲೆನೋವಿನ ಕೆಲಸ. ಇಯರ್‌ಫೋನ್‌ಗಳು ಈ ರೀತಿ ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಇಬ್ಬರು ಸಂಶೋಧಕರು ಇಯರ್‌ಫೋನ್‌ಗಳ ವೈರ್‌ಗಳಲ್ಲಿನ ಗೊಂದಲದ ಬಗ್ಗೆ ಆಸಕ್ತಿದಾಯಕ ಸಂಶೋಧನೆ ನಡೆಸಿದ್ದಾರೆ. ಅದರ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.

2012 ರಲ್ಲಿ ಇಬ್ಬರೂ ಸಂಶೋಧಕರು ಗಂಟು ಸಿದ್ಧಾಂತವನ್ನು ಅಧ್ಯಯನ ಮಾಡಿದರು. ಇದಕ್ಕೆ ವೈಜ್ಞಾನಿಕ ಕಾರಣವಿದೆ ಅನ್ನೋದನ್ನು ಕಂಡುಕೊಂಡರು. ವಿವಿಧ ಗಾತ್ರದ ಹಲವು ತಂತಿಗಳ ಮೋಜಿನ ಪ್ರಯೋಗ ಮಾಡಿ, ತಂತಿಗಳು ಸಿಕ್ಕಿಹಾಕಿಕೊಳ್ಳಲು ಕೇವಲ 10 ಸೆಕೆಂಡ್ ಬೇಕು ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಸಿದ್ಧಾಂತವನ್ನು ಗಂಟು ಸಿದ್ಧಾಂತ ಎಂದೂ ಕರೆಯುತ್ತಾರೆ.

ಅಧ್ಯಯನದ ಸಂದರ್ಭದಲ್ಲಿ ಸಂಶೋಧಕರು ತಂತಿಗಳನ್ನು ಪೆಟ್ಟಿಗೆಯಲ್ಲಿ ಇರಿಸಿ ತಿರುಗಿಸಲು ಪ್ರಾರಂಭಿಸಿದರು. ಬಾಕ್ಸ್ ಅನ್ನು 5-10 ಬಾರಿ ತಿರುಗಿಸಿದ ನಂತರ, 10 ಸೆಕೆಂಡುಗಳಲ್ಲಿ ಇಯರ್‌ಫೋನ್‌ಗಳು ಪರಸ್ಪರ ಸಿಕ್ಕಿಹಾಕಿಕೊಂಡಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ವೈರ್‌ಗಳ ಉದ್ದ ಮತ್ತು ದಪ್ಪ ಈ ಪ್ರಕ್ರಿಯೆಯಲ್ಲಿ ವ್ಯತ್ಯಾಸವನ್ನುಂಟುಮಾಡುತ್ತದೆ. ಉದ್ದವಾದ ಮತ್ತು ಮೃದುವಾದ ವೈರ್‌ಗಳು ಈ ರೀತಿ ಗಂಟು ಬೀಳುವ, ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಹೆಚ್ಚು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...