ಕರ್ವಾ ಚೌತ್ ಅನ್ನು ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ತಮ್ಮ ಪತಿಯ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲು, ಪತ್ನಿಯರು ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ಪಾರ್ವತಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ.
ಕರ್ವಾ ಚೌತ್ ದಂಪತಿಗಳಿಗೆ ವಿಶೇಷವಾಗಿದ್ದು, ಉದಯಪುರ ಸಂಸದ ಅರ್ಜುನ್‌ಲಾಲ್ ಮೀನಾ ಅವರ ಮನೆಯಲ್ಲೂ ಕರ್ವಾ ಚೌತ್ ಸಂಭ್ರಮದಿಂದ ಆಚರಿಸಲಾಗಿದೆ. ಅದರಲ್ಲೇನು ವಿಶೇಷ ಅಂತೀರಾ ? ಅವರು ತಮ್ಮ ಇಬ್ಬರು ಪತ್ನಿಯರೊಂದಿಗೆ ಕರ್ವಾ ಚೌತ್ ಆಚರಿಸಿಕೊಂಡಿದ್ದಾರೆ.
ಮೀನಾ ಅವರು ಬುಡಕಟ್ಟು ಜನಾಂಗದವರಾಗಿರುವುದರಿಂದ, ಅವರು ಹಿಂದೂ ವಿವಾಹ ಕಾಯಿದೆ, 1955 ರಿಂದ ವಿನಾಯಿತಿ ಪಡೆಯಲು ಅರ್ಹರಾಗಿದ್ದಾರೆ, ಹಿಂದೂ ವಿವಾಹ ಕಾಯಿದೆಯ ನಿಬಂಧನೆಗಳು ಆದಿವಾಸಿಗಳಿಗೆ ಅನ್ವಯಿಸುವುದಿಲ್ಲ. ಕಾಯಿದೆಯ ಸೆಕ್ಷನ್ 2 (2) ಅವುಗಳನ್ನು ಷರತ್ತಿನ ಅರ್ಥದಲ್ಲಿ ಸ್ಪಷ್ಟವಾಗಿ ಹೊರಗಿಡಲಾಗಿದೆ.