alex Certify ಇನ್ಮೇಲೆ ಮಾರಾಟವಾಗುವುದಿಲ್ಲ ಈ ಕಂಪನಿಯ ಸಿಮೆಂಟ್‌…..! ಆರ್ಥಿಕ ನಷ್ಟದಿಂದ ಆಘಾತಕಾರಿ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಮೇಲೆ ಮಾರಾಟವಾಗುವುದಿಲ್ಲ ಈ ಕಂಪನಿಯ ಸಿಮೆಂಟ್‌…..! ಆರ್ಥಿಕ ನಷ್ಟದಿಂದ ಆಘಾತಕಾರಿ ನಿರ್ಧಾರ

ಭಾರತದಲ್ಲಿ ಸಾಕಷ್ಟು ಸಿಮೆಂಟ್‌ ಕಂಪನಿಗಳಿವೆ. ಎಸಿಸಿ, ಅಂಬುಜಾ, ಜೇಪೀ ಸಿಮೆಂಟ್, ಬುಲಂದ್, ಮಾಸ್ಟರ್ ಬಿಲ್ಡರ್,  ಬುನಿಯಾದ್ ಸಿಮೆಂಟ್ ಹೀಗೆ ಅನೇಕ ಹೆಸರುಗಳು ಫೇಮಸ್‌ ಆಗಿವೆ.

ಒಂದು ಕಾಲದಲ್ಲಿ ಜೇಪೀ ಸಿಮೆಂಟ್, ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದರೆ ಕಾಲಾನಂತರದಲ್ಲಿ ಹೊಸ ಹೊಸ ಬ್ರಾಂಡ್‌ಗಳು ಬಂದವು. ಈಗ JAL ಮತ್ತು ಈ ಗ್ರೂಪ್‌ನ ಇತರ ಕಂಪನಿಗಳು ತಮ್ಮ ಸಿಮೆಂಟ್ ವ್ಯವಹಾರದ ಉಳಿದ ಭಾಗವನ್ನು ಸಹ ಮಾರಾಟ ಮಾಡಿವೆ.

JAL ತನ್ನ ಉಳಿದ ಸಿಮೆಂಟ್ ವ್ಯವಹಾರವನ್ನು ದಾಲ್ಮಿಯಾ ಗ್ರೂಪ್‌ಗೆ ಮಾರಾಟ ಮಾಡುವುದಾಗಿ ಘೋಷಿಸಿದೆ. ಎರಡೂ ಕಂಪನಿಗಳ ಮಧ್ಯೆ 5,666 ಕೋಟಿ ರೂಪಾಯಿಗೆ ಒಪ್ಪಂದವಾಗಿದೆ. ಸಾಲ ತಗ್ಗಿಸಲು ತೆಗೆದುಕೊಂಡಿರುವ ಈ ಕ್ರಮದಿಂದ ಜೇಪೀ ಗ್ರೂಪ್, ಸಿಮೆಂಟ್ ವ್ಯವಹಾರದಿಂದ ಸಂಪೂರ್ಣವಾಗಿ ಹಿಂದೆ ಸರಿಯಲಿದೆ. ಈ ಒಪ್ಪಂದದ ಅಡಿಯಲ್ಲಿ ದಾಲ್ಮಿಯಾ ಭಾರತ್ ಲಿಮಿಟೆಡ್,  ಜೇಪೀ ಗ್ರೂಪ್‌ನ ಪ್ರಮುಖ ಕಂಪನಿ JAL ಮತ್ತು ಅದರ ಸಂಯೋಜಿತ ಕಂಪನಿಯಿಂದ ವಾರ್ಷಿಕ 94 ಲಕ್ಷ ಟನ್ ಸಿಮೆಂಟ್ ಸಾಮರ್ಥ್ಯದೊಂದಿಗೆ ವಿವಿಧ ರಾಜ್ಯಗಳಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ.

ಇದರೊಂದಿಗೆ ದಾಲ್ಮಿಯಾ ಭಾರತ್ ಲಿಮಿಟೆಡ್‌ನ ಸಿಮೆಂಟ್ ಉತ್ಪಾದನಾ ಮಿತಿಯು ವಾರ್ಷಿಕ 35.9 ಮಿಲಿಯನ್ ಟನ್‌ಗಳಿಂದ 45.3 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಲಿದೆ. ದಾಲ್ಮಿಯಾ ಗ್ರೂಪ್‌ನ ಉಪಸ್ಥಿತಿ ಮಧ್ಯ ಭಾರತದಲ್ಲಿಯೂ ಇರುತ್ತದೆ. ಈ ಒಪ್ಪಂದವು 94 ಲಕ್ಷ ಟನ್ ವಾರ್ಷಿಕ ಸಾಮರ್ಥ್ಯದ ಸಿಮೆಂಟ್ ಘಟಕ, 67 ಲಕ್ಷ ಟನ್ ಕ್ಲಿಂಕರ್ ಸಾಮರ್ಥ್ಯ ಮತ್ತು 280 ಮೆಗಾವ್ಯಾಟ್‌ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರವನ್ನು ಒಳಗೊಂಡಿದೆ. 2026-27ರ ಆರ್ಥಿಕ ವರ್ಷದಲ್ಲಿ 75 ಮಿಲಿಯನ್ ಟನ್ ಮತ್ತು 2030-31ರ ವೇಳೆಗೆ 11 ರಿಂದ 13 ಮಿಲಿಯನ್ ಟನ್ ಸಾಮರ್ಥ್ಯದ ಸಿಮೆಂಟ್ ಕಂಪನಿಯಾಗಿ ಬದಲಾಗುವ ಗುರಿಯನ್ನು ಸಂಸ್ಥೆ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...