ನವದೆಹಲಿ- ಜಿಯೋ ಸಂಸ್ಥೆ ಪ್ರಾಯೋಗಿಕವಾಗಿ 5ಜಿ ಸೇವೆ ಆರಂಭ ಮಾಡಿದೆ. ಇದರ ಮುಂದುವರೆದ ಭಾಗವಾಗಿ ಸಾರ್ವಜನಿಕ ವೈಫೈ ಸೇವೆಯನ್ನು ರಿಲಯನ್ಸ್ ಜಿಯೋ ಆರಂಭ ಮಾಡಿದೆ. ಮೊದಲು ರಾಜಸ್ಥಾನದ ದೇಗುಲನಗರಿ ನಾಥ್ದ್ವಾರಾದಲ್ಲಿ ಸಾರ್ವಜನಿಕ ವೈಫೈ ಸೇವೆ ಆರಂಭಿಸಲಾಗಿದೆ.
ಹೌದು, 5ಜಿ ಸೇವೆ ಎಲ್ಲರಿಗೂ ತಲುಪಬೇಕು ಎಂಬ ನಿಟ್ಟಿನಲ್ಲಿ ಈ ರೀತಿಯಾಗಿ ಸೇವೆ ಆರಂಭ ಮಾಡಲಿದೆ. ಪ್ರಾಯೋಗಿಕವಾಗಿ ರಾಜಸ್ಥಾನದಲ್ಲಿ ಸಾರ್ವಜನಿಕ ವೈಫೈ ಆರಂಭ ಮಾಡಿದ್ದು, ಮುಂಬರುವ ದಿನಗಳಲ್ಲಿ ರೈಲು ನಿಲ್ದಾಣಗಳು, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಕಡೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ಕಂಪನಿ ಶನಿವಾರ ತಿಳಿಸಿದೆ.
ಇನ್ನು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಎಂ ಅಂಬಾನಿ ಪ್ರಕಟಣೆ ಹೊರಡಿಸಿದ್ದಾರೆ. ಅದರ ಪ್ರಕಾರ, ಶ್ರೀನಾಥ್ ದೇಗುಲ ನಗರವಾದ ನಾಥ್ದ್ವಾರದಲ್ಲಿ ನಾವು ಇಂದು 5ಜಿ ಆಧಾರಿತ ವೈಫೈ ಸೇವೆ ಆರಂಭಿಸಿದ್ದೇವೆ. ಇದರ ಜೊತೆಗೆ ಬೇರೆ ಬೇರೆ ಪ್ರದೇಶಗಳಿಗೆ ನಮ್ಮ ಸೇವೆ ವಿಸ್ತರವಾಗಲಿದೆ. ಚೆನ್ನೈ ನಗರದಲ್ಲಿ ಕೂಡ ಜಿಯೋ ಟ್ರೂ5ಜಿ ವೆಲ್ಕಮ್ ಆಫರ್ ನೀಡಲಾಗಿದೆ ಎಂದು ಹೇಳಿದ್ದಾರೆ.