alex Certify ಇನ್ನೇನು ಆನೆ ದಾಳಿ ಮಾಡುತ್ತದೆ ಅನ್ನುವಷ್ಟರಲ್ಲಿ ನಡೆದಿದೆ ʼಅಚ್ಚರಿʼ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೇನು ಆನೆ ದಾಳಿ ಮಾಡುತ್ತದೆ ಅನ್ನುವಷ್ಟರಲ್ಲಿ ನಡೆದಿದೆ ʼಅಚ್ಚರಿʼ ಘಟನೆ

ಆನೆಗಳು ಸಾಮಾನ್ಯವಾಗಿ ಸೌಮ್ಯ ಪ್ರಾಣಿ ವರ್ಗಕ್ಕೆ ಸೇರುತ್ತದೆ. ಪ್ರಚೋದನೆಯ ಹೊರತು ಯಾರಿಗೂ ಹಾನಿ ಮಾಡುವುದಿಲ್ಲ. ಈ ವಿಷಯ ಏಕೆ ಹೇಳಲಾಗುತ್ತಿದೆ ಎಂದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆನೆಯೊಂದು ದಾಳಿ ನಡೆಸಲು ಬರುವ ವಿಡಿಯೋವೊಂದು ಸಾಕಷ್ಟು ವೈರಲ್​ ಆಗುತ್ತಿದೆ, ಆನೆಯ ವರ್ತನೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.

ಆನೆಯೊಂದು ಇಬ್ಬರು ವ್ಯಕ್ತಿಗಳ ಕಡೆಗೆ ದಾಳಿ ನಡೆಸಲು ಓಡೋಡಿ ಬರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಆದರೆ, ಆ ವ್ಯಕ್ತಿಗಳಿಬ್ಬರು ಅಲುಗಾಡದೇ ನಿಂತರು. ಒಂದೇ ಹೆಜ್ಜೆಯನ್ನೂ ಹಿಂದಿಡಲಿಲ್ಲ. ಆಶ್ಚರ್ಯಕರ ಎಂದರೆ ಆನೆ ಅವರ ಮೇಲೆ ದಾಳಿ ಮಾಡಲಿಲ್ಲ ಮತ್ತು ತಾನೇ ಹೆಜ್ಜೆ ಹಿಂದಿಟ್ಟು ಹೊರಟುಹೋಯಿತು.

“ಗಾಬರಿಯಾಗದಿರುವುದು ಅತ್ಯುತ್ತಮ ಸ್ವರಕ್ಷಣೆ ವಿಧಾನವಾಗಿದೆ’ ಎಂದು ಫೀಗನ್​ ಹೆಸರಿನ ಶಿರ್ಷಿಕೆಯಲ್ಲಿದೆ. ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ಸುಮಾರು 2 ಮಿಲಿಯನ್​ ವೀಕ್ಷಣೆಗಳನ್ನು ಗಳಿಸಿದೆ.

ಅವರಿಬ್ಬರ ಬಳಿ ಬಂದೂಕಿತ್ತು, ಹೀಗಾಗಿ ಆನೆ ಹಿಮ್ಮೆಟ್ಟಿತು ಎಂದು ಕೆಲವು ಬಳಕೆದಾರರು ಭಾವಿಸಿದರೆ, ಇತರರು ಅವರನ್ನು ಧೈರ್ಯಶಾಲಿ ಎಂದು ಕರೆದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...