ಆನೆಗಳು ಸಾಮಾನ್ಯವಾಗಿ ಸೌಮ್ಯ ಪ್ರಾಣಿ ವರ್ಗಕ್ಕೆ ಸೇರುತ್ತದೆ. ಪ್ರಚೋದನೆಯ ಹೊರತು ಯಾರಿಗೂ ಹಾನಿ ಮಾಡುವುದಿಲ್ಲ. ಈ ವಿಷಯ ಏಕೆ ಹೇಳಲಾಗುತ್ತಿದೆ ಎಂದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆನೆಯೊಂದು ದಾಳಿ ನಡೆಸಲು ಬರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ, ಆನೆಯ ವರ್ತನೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.
ಆನೆಯೊಂದು ಇಬ್ಬರು ವ್ಯಕ್ತಿಗಳ ಕಡೆಗೆ ದಾಳಿ ನಡೆಸಲು ಓಡೋಡಿ ಬರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಆದರೆ, ಆ ವ್ಯಕ್ತಿಗಳಿಬ್ಬರು ಅಲುಗಾಡದೇ ನಿಂತರು. ಒಂದೇ ಹೆಜ್ಜೆಯನ್ನೂ ಹಿಂದಿಡಲಿಲ್ಲ. ಆಶ್ಚರ್ಯಕರ ಎಂದರೆ ಆನೆ ಅವರ ಮೇಲೆ ದಾಳಿ ಮಾಡಲಿಲ್ಲ ಮತ್ತು ತಾನೇ ಹೆಜ್ಜೆ ಹಿಂದಿಟ್ಟು ಹೊರಟುಹೋಯಿತು.
“ಗಾಬರಿಯಾಗದಿರುವುದು ಅತ್ಯುತ್ತಮ ಸ್ವರಕ್ಷಣೆ ವಿಧಾನವಾಗಿದೆ’ ಎಂದು ಫೀಗನ್ ಹೆಸರಿನ ಶಿರ್ಷಿಕೆಯಲ್ಲಿದೆ. ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ಸುಮಾರು 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಅವರಿಬ್ಬರ ಬಳಿ ಬಂದೂಕಿತ್ತು, ಹೀಗಾಗಿ ಆನೆ ಹಿಮ್ಮೆಟ್ಟಿತು ಎಂದು ಕೆಲವು ಬಳಕೆದಾರರು ಭಾವಿಸಿದರೆ, ಇತರರು ಅವರನ್ನು ಧೈರ್ಯಶಾಲಿ ಎಂದು ಕರೆದರು.
https://twitter.com/TheFigen/status/1551926392266362881?ref_src=twsrc%5Etfw%7Ctwcamp%5Etweetembed%7Ctwterm%5E1551926392266362881%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Felephant-charges-at-two-men-in-viral-video-see-what-happened-next-1980537-2022-07-27