alex Certify ಮುಂದಿನ ತಿಂಗಳಿಂದ ಇಲ್ಲಿ ಬಂದ್‌ ಆಗಲಿದೆ ಡಿಸೇಲ್ ಆಟೋಗಳ ನೋಂದಣಿ: ಈ ನಿರ್ಧಾರದ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ತಿಂಗಳಿಂದ ಇಲ್ಲಿ ಬಂದ್‌ ಆಗಲಿದೆ ಡಿಸೇಲ್ ಆಟೋಗಳ ನೋಂದಣಿ: ಈ ನಿರ್ಧಾರದ ಹಿಂದಿದೆ ಈ ಕಾರಣ

ಜನವರಿ 1, 2023. ವರ್ಷದ ಮೊದಲ ದಿನ. ಅಂದಿನಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಡೀಸೆಲ್ ಆಟೋಗಳು ನೋಂದಣಿ ಆಗಲಿದೆ ಬಂದ್. ಇನ್ಮುಂದೆ ಏನಿದ್ದರೂ ಸಿಎನ್‌ಜಿ ಅಥವಾ ಎಲೆಕ್ಟ್ರಿಕ್ ಆಟೋಗಳನ್ನು ಮಾತ್ರ ನೋಂದಾಯಿಸಬಹುದು ಎಂದು ಆದೇಶ ಹೊರಡಿಸಲಾಗಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯವನ್ನು ಮೇಲ್ವಿಚಾರಣೆ ಮಾಡುವ ಕೇಂದ್ರ ಸರ್ಕಾರಿ ಸಂಸ್ಥೆಯಾದ ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಆಯೋಗ (ಸಿಎಕ್ಯೂಎಂ) ಈ ಆದೇಶ ಹೊರಡಿಸಿದೆ.

ಈ ಆದೇಶದ ಪ್ರಕಾರ, ಜನವರಿ 1, 2023 ರಿಂದ, ದೆಹಲಿ ಸೇರಿದಂತೆ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ NCR ಜಿಲ್ಲೆಗಳಲ್ಲಿ CNG ಅಥವಾ ಎಲೆಕ್ಟ್ರಾನಿಕ್ ಆಟೋಗಳನ್ನ ಮಾತ್ರ ನೋಂದಾವಣೆ ಮಾಡಿಕೊಳ್ಳಲಾಗುವುದು. 2026ರ ವೇಳೆಗೆ ಡೀಸೆಲ್‌ನಲ್ಲಿ ಚಲಿಸುವ ಆಟೋಗಳನ್ನು ದೆಹಲಿ-ಎನ್‌ಸಿಆರ್‌ನ ರಸ್ತೆಗಳಿಂದ ಸಂಪೂರ್ಣವಾಗಿ ತೆಗೆದುಹಾಕಬೇಕು ಎಂಬುದು ಇದರ ಉದ್ದೇಶ.

ಡಿಸೆಂಬರ್ 31, 2024 ರ ನಂತರ ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಫರೀದಾಬಾದ್ ಮತ್ತು ಗುರುಗ್ರಾಮ್‌ನಲ್ಲಿ ಡೀಸೆಲ್ ಆಟೋಗಳು ಓಡುವುದಿಲ್ಲ ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ. ಸೋನೆಪತ್, ರೋಹ್ಟಕ್, ಝಜ್ಜರ್ ಮತ್ತು ಬಾಗ್ಪತ್ 31 ಡಿಸೆಂಬರ್ 2025 ರ ಗಡುವನ್ನು ಹೊಂದಿದ್ದು, ಡೀಸೆಲ್ ಆಟೋಗಳು 2026 ರ ನಂತರ ಇಡೀ NCR ನಲ್ಲಿ ಸೇವೆಯಿಂದ ಹೊರಗುಳಿಯಲಿವೆ.

ಈ ಆದೇಶ ಹರಿಯಾಣ, ಯುಪಿ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಬರುವ NCR ಜಿಲ್ಲೆಗಳಿಗೂ ಅನ್ವಯವಾಗಲಿದೆ. ಹರಿಯಾಣದ 14 ಜಿಲ್ಲೆಗಳಾದ ಫರೀದಾಬಾದ್, ಗುರುಗ್ರಾಮ್, ನುಹ್, ರೋಹ್ಟಕ್, ಸೋನಿಪತ್, ರೇವಾರಿ, ಜಜ್ಜರ್, ಪಾಣಿಪತ್, ಪಲ್ವಾಲ್, ಭಿವಾನಿ, ಚಾರ್ಖಿ ದಾದ್ರಿ, ಮಹೇಂದ್ರಗಢ್, ಜಿಂದ್ ಮತ್ತು ಕರ್ನಾಲ್.

ಅಂತೆಯೇ, ಇದು ಯುಪಿಯ 8 ಜಿಲ್ಲೆಗಳು, ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಬುಲಂದ್‌ಶಹರ್, ಬಾಗ್‌ಪತ್, ಹಾಪುರ್, ಶಾಮ್ಲಿ ಮತ್ತು ಮುಜಾಫರ್‌ನಗರ. ಇನ್ನೂ ರಾಜಸ್ಥಾನದ ಅಲ್ವಾರ್ ಮತ್ತು ಭರತ್‌ಪುರ ಇದರ ವ್ಯಾಪ್ತಿಗೆ ಬರುತ್ತವೆ. ಆದರೆ, CAQM ನ ಈ ಆದೇಶವು ಇಡೀ ದೆಹಲಿಗೆ ಅನ್ವಯಿಸುತ್ತದೆ.

ಈ ಆದೇಶವನ್ನು ತರುವುದರ ಹಿಂದೆ ಇರುವ ಉದ್ದೇಶ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿ ವರ್ಷ ವಾಯು ಮಾಲಿನ್ಯದ ಸಮಸ್ಯೆ ಹೆಚ್ಚುತ್ತಿದೆ. ಗಾಳಿಯಲ್ಲಿ ಮಾಲಿನ್ಯದ ಪ್ರಮಾಣವೂ ಹೆಚ್ಚುತ್ತಿದೆ. ಸುದ್ದಿ ಸಂಸ್ಥೆಯ ಪ್ರಕಾರ, ದೆಹಲಿಯಲ್ಲಿ ಮಾಲಿನ್ಯದಲ್ಲಿ PM2.5 ಅನ್ನು ಹೆಚ್ಚಿಸುವಲ್ಲಿ ವಾಹನಗಳಿಂದ ಹೊರಬರುವ ಹೊಗೆಯ ಪಾಲು ಶೇಕಡಾ 40 ಕ್ಕಿಂತ ಹೆಚ್ಚು. ಇದೇ ಕಾರಣಕ್ಕೆ ಈ ನಿರ್ಧಾರ ಜಾರಿ ಮಾಡುವುದು ಅನಿವಾರ್ಯ ಎಂದು ಕೇಂದ್ರ ಸರ್ಕಾರ ಹೇಳಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...