alex Certify ಇದು ಹೊಸ ಧಾರಾವಾಹಿ…. ಕುತೂಹಲ ಮೂಡಿಸಿದ ಟಿ.ಎನ್.ಸೀತಾರಾಮನ್ ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಹೊಸ ಧಾರಾವಾಹಿ…. ಕುತೂಹಲ ಮೂಡಿಸಿದ ಟಿ.ಎನ್.ಸೀತಾರಾಮನ್ ಪೋಸ್ಟ್

ಬೆಂಗಳೂರು: ಕಿರುತೆರೆ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಟಿ.ಎನ್. ಸೀತಾರಾಮನ್ ಅವರ ಜನಪ್ರಿಯ ಧಾರಾವಾಹಿ ಮಾಯಾಮೃಗ ಸೀರಿಯಲ್ ನ ಎರಡನೇ ಭಾಗ ಶೀಘ್ರದಲ್ಲಿಯೇ ಪ್ರಸಾರವಾಗಲಿರುವ ಬಗ್ಗೆ ಇತ್ತೀಚೆಗಷ್ಟೇ ನಿರ್ದೇಶಕರು ತಿಳಿಸಿದ್ದರು. ಮಾಯಾಮೃಗ ಎಲ್ಲಿ? ಎಂದು ಕಾಯುತ್ತಿದ್ದ ವೀಕ್ಷಕರಿಗೆ ಇದೀಗ ಮತ್ತೆ ಮಾಯಾಮೃಗ-ಭಾಗ 2 ಎಂದು ಸೀತಾರಾಮನ್ ಸ್ಪಷ್ಟನೆ ನೀಡಿಸಿದ್ದಾರೆ.

ಇದು ಹೊಸ ಧಾರಾವಾಹಿ….ಮಾಯಾಮೃಗ ಭಾಗ 2 ಎಂದು ಹೇಳುವ ಮೂಲಕ ಹೊಸ ಕಥೆಯ ಬಗ್ಗೆ ಕುತೂಹಲ ಇಮ್ಮಡಿಗೊಳಿಸಿದ್ದಾರೆ. ಅಲ್ಲದೇ ಹೊಸ ಕಲಾವಿದರು, ಹೊಸ ತಂಡದ ಬಗ್ಗೆಯೂ ಸುಳಿವು ನೀಡಿದಂತಿದೆ ನಿರ್ದೇಶಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಸ್ಟ್.

ಇತ್ತೀಚೆಗೆ ಮಾಯಾಮೃಗ ಧಾರಾವಾಹಿ ಅಕ್ಟೋಬರ್ ನಲ್ಲಿ ನಿಮ್ಮ ಮುಂದೆ ಎಂದು ಟಿ.ಎನ್ ಸೀತಾರಾಮನ್ ತಿಳಿಸಿದ್ದರು. ಇದೀಗ ಇದು ಹೊಸ ಕಥೆ ಮಾಯಾಮೃಗ ಭಾಗ-2 ಎಂದು ಫೇಸ್ ಬುಕ್ ನಲ್ಲಿ ಶೇರ್ ಮಾಡಿರುವ ನಿರ್ದೇಶಕರು ಸಿರಿ ಕನ್ನಡ ಟಿವಿಯಲ್ಲಿ ಪ್ರಸಾರವಾಗುವ ಬಗ್ಗೆಯೂ ಪೋಸ್ಟ್ ಹಂಚಿಕೊಂಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...