ಬೆಂಗಳೂರು: ಸಿಂದಗಿ ಉಪಚುನಾವಣೆಯಲ್ಲಿ ಸೂಟ್ ಕೇಸ್ ಕೊಟ್ಟಿದ್ದಕ್ಕೆ ಹೆಚ್.ಡಿ. ಕುಮಾರಸ್ವಾಮಿ ಚುನಾವಣಾ ಪ್ರಚಾರಕ್ಕೆ ಬಂದಿದ್ದಾರೆ ಎಂದು ಹೇಳಿದ್ರು. ಆದರೂ ನಾನು ಆ ನೋವನ್ನೆಲ್ಲ ನುಂಗಿಕೊಂಡು ಪ್ರಚಾರ ಮಾಡಿದ್ದೆ. ಯಾರೂ ಕೂಡ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ದೇವನಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿಂದಗಿ ಉಪಚುನಾವಣೆ ಬಳಿಕ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಯಾವುದೇ ಪಕ್ಷದ ನಾಯಕನ ಜೊತೆಯೂ ಮಾತನಾಡಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದರು.
ಮಾರಾಟವಾಗ್ತಿದೆ ವಿಶ್ವದ ಅತ್ಯಂತ ಕೊಳಕು ಮನೆ..!
ರಾಜ್ಯದಲ್ಲಿ ಇನ್ಮುಂದೆ ಯಾರೂ ಕೂಡ ರೈತರ ಸಾಲ ಮನ್ನಾ ಮಾಡಲ್ಲ. ಸಾಲ ಮನ್ನಾ ಮಾಡಿದರೂ ಉಪಯೋಗಕ್ಕೆ ಬರಲ್ಲ. 25 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೆ. ಹೈನುಗಾರಿಕೆ, ದ್ರಾಕ್ಷಿ, ತೋಟಗಾರಿಕಾ ಬೆಳೆಗೆ ಕೊಟ್ರೆ ಅನುಕೂಲವಾಗುತ್ತೆ. ನನಗೆ 5 ವರ್ಷ ಸರ್ಕಾರ ರಚಿಸಲು ಅವಕಾಶ ನೀಡಿ. ರೈತರು 1 ರೂಪಾಯಿ ಸಾಲ ಮಾಡದಂತೆ ನೋಡಿಕೊಳ್ಳುತ್ತೇನೆ. ನಮಗೆ ಅಧಿಕಾರ ಕೊಡಿ ಅಂತ ಹಳ್ಳಿಗಳತ್ತ ಹೋಗುತ್ತೇನೆ. ಇದು ನನ್ನ ಕೊನೇ ಹೋರಾಟ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನೀರು ಕೊಡುತ್ತೇನೆ ಎಂದು ಎತ್ತಿನಹೊಳೆ ಹಣ ಲೂಟಿ ಮಾಡಿದ್ದಾರೆ. ಸರ್ಕಾರದ ನೂರು ದಿನಗಳ ಸಾಧನೆ ಜಾಹೀರಾತಿಗಾಗಿ 10-20 ಕೋಟಿ ಖರ್ಚು ಮಾಡಿದ್ದಾರೆ. ಜಾಹೀರಾತಿನ ಮೂಲಕ ಜನರನ್ನು ಮರಳು ಮಾಡಲು ಯತ್ನಿಸಿದ್ದಾರೆ. 8 ಸಾವಿರ ಕೋಟಿಯಿಂದ ಆರಂಭವಾದ ಎತ್ತಿನಹೊಳೆ ಯೋಜನೆ ಈಗ 24 ಸಾವಿರ ಕೋಟಿಗೆ ಬಂದು ನಿಂತಿದೆ ಎಂದು ಟೀಕಿಸಿದರು.