ಬೆಂಗಳೂರು: 2020-21ನೆ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಸಂಜೆ 4:30ಕ್ಕೆ ಪ್ರಕಟಗೊಳ್ಳಲಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಲಿದ್ದು, ಬಳಿಕ ಇಲಾಖೆ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗಲಿದೆ.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ದ್ವಿತೀಯ ಪಿಯು ಪರೀಕ್ಷೆಗಳು ನಡೆದಿಲ್ಲ. ಆದರೂ ಎಸ್.ಎಸ್.ಎಲ್.ಸಿ. ಹಾಗೂ ಪ್ರಥಮ ಪಿಯು ಫಲಿತಾಂಶ ಹಾಗೂ ಆಂತರಿಕ ಅಂಕಗಳ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತಿರುವುದು ವಿಶೇಷ.
ಅತ್ತೆಗೆ ಬಾಯ್ಫ್ರೆಂಡ್ ಬೇಕಾಗಿದ್ದಾನೆಂದು ಜಾಹೀರಾತು ನೀಡಿದ ಸೊಸೆ..!
ಸಂಜೆ 4:30ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, http://pue.kar.nic.in/ ವೆಬ್ ಸೈಟ್ ನಲ್ಲಿ ಕ್ಲಿಕ್ ಮಾಡಬಹುದು. Know My Register Number ಮೂಲಕ ಫಲಿತಾಂಶ ನೋಡಬಹುದಾಗಿದೆ. ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳಿಗೆ ಅಸಮಾಧಾನವಿದ್ದರೆ ಆಗಸ್ಟ್ ನಲ್ಲಿ ಪರೀಕ್ಷೆಗಳನ್ನು ಬರೆಯಬಹುದಾಗಿದೆ. ಆದರೆ ಒಮ್ಮೆ ಫಲಿತಾಂಶ ತಿರಸ್ಕರಿಸಿದರೆ ಮತ್ತೆ ಹಳೆ ಅಂಕ ಪಡೆಯಲು ಅವಕಾಶವಿರುವುದಿಲ್ಲ ಎಂದು ಪಿಯು ಬೋರ್ಡ್ ಸ್ಪಷ್ಟಪಡಿಸಿದೆ.