alex Certify ಇಂದು ʼರೇಮೊʼ ಚಿತ್ರದ ಮತ್ತೊಂದು ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ʼರೇಮೊʼ ಚಿತ್ರದ ಮತ್ತೊಂದು ಹಾಡು ರಿಲೀಸ್

ನವೆಂಬರ್ 25ರಂದು ರಾಜ್ಯಾದ್ಯಂತ ತೆರೆ ಕಾಣಲು ಸಿದ್ಧವಾಗಿರುವ ಈಶಾನ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ರೇಮೊ ಚಿತ್ರ ಈಗಾಗಲೇ ಹಾಡುಗಳ ಮೂಲಕವೇ ಜನಪ್ರಿಯವಾಗಿದ್ದು, ಇಂದು ಮತ್ತೊಂದು ಲಿರಿಕಲ್ ಸಾಂಗ್ ವೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದೆ.

ಜಗದೋದ್ಧಾರನ ಎಂಬ ಹಾಡಿಗೆ ಇಂದು ನಾಗರಾಜ್ ಧ್ವನಿಯಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.

ಇಂದು ಸಂಜೆ 6:06ಕ್ಕೆ ಹಾಡು ಬಿಡುಗಡೆಯಾಗಲಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ಜಯಾದಿತ್ಯ ಫಿಲ್ಮ್ಸ್ ಬ್ಯಾನರ್ ನಡಿ  ಸಿ.ಆರ್. ಮನೋಹರ್ ಬಂಡವಾಳ ಹೂಡಿದ್ದು, ಸಿ.ಆರ್. ಗೋಪಿ ಸಹ ನಿರ್ಮಾಪಕರಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...