
ಭಾರತ ಹಾಗೂ ಶ್ರೀಲಂಕಾ ನಡುವೆ ಇಂದು ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯ ನಡೆಯಲಿದೆ. ಈಗಾಗಲೇ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಭರ್ಜರಿ ಜಯ ಕಂಡಿರುವ ಭಾರತ ತಂಡ ಸರಣಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಆಲ್ ರೌಂಡರ್ ಕೃನಾಲ್ ಪಾಂಡ್ಯ ಅವರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ನಿನ್ನೆ ನಡೆಯಬೇಕಿದ್ದ ಪಂದ್ಯವನ್ನು ರದ್ದು ಮಾಡಲಾಯಿತು ಕೃನಾಲ್ ಪಾಂಡ್ಯ ಜೊತೆ ಸಂಪರ್ಕದಲ್ಲಿದ್ದ 8 ಆಟಗಾರರಿಗೂ ಇದೀಗ ಕೊರೊನಾ ನೆಗೆಟಿವ್ ಬಂದಿದ್ದದ್ದರು ಈ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಹೇಳಲಾಗಿದೆ ನಿನ್ನೆಯ ಪಂದ್ಯವನ್ನು ಇಂದು ನಡೆಸಲಿದ್ದಾರೆ ಕೃನಾಲ್ ಪಾಂಡ್ಯ ಸರಣಿಯಿಂದ ದೂರ ಉಳಿಯಲಿದ್ದಾರೆ.
ಭಾರತ-ಶ್ರೀಲಂಕಾ ಟಿ-20: ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ ಸೇರಿ 9 ಆಟಗಾರರು ಹೊರಕ್ಕೆ
ಭಾರತ ತಂಡದಲ್ಲಿ ಈಗಾಗಲೇ ಬಹುತೇಕ ಹೊಸ ಆಟಗಾರರಿಗೆ ಪಂದ್ಯದಲ್ಲಾಡುವ ಅವಕಾಶ ಸಿಕ್ಕಿದ್ದು ರುತುರಾಜ್ ಗಾಯಕ್ವಾಡ್ ಹಾಗು ದೇವದತ್ ಪಡಿಕ್ಕಲ್ ಈ ಇಬ್ಬರು ಆಟಗಾರರು ಕಣಕ್ಕಿಳಿಯುಳುವುದನ್ನು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇಂದಿನ ಪಂದ್ಯದಲ್ಲಾದರು ಈ ಇಬ್ಬರು ಬ್ಯಾಟ್ಸ್‌ಮನ್ ಗಳಿಗೆ ಅವಕಾಶ ಸಿಗುತ್ತಾ ಕಾದುನೋಡಬೇಕಾಗಿದೆ ದಸನ್ ಶನಾಕ ನೇತೃತ್ವದ ಶ್ರೀಲಂಕಾ ತಂಡಕ್ಕೆ ಇಂದು ಗೆಲ್ಲಲೇಬೇಕಾದ ಅನಿವಾರ್ಯ ಇದೆ.