
ಶ್ರೀ ಗಣೇಶ್ ಪರಶುರಾಮ್ ನಿರ್ದೇಶನದ ಬಹುನಿರೀಕ್ಷಿತ ‘ಬ್ಯಾಂಗ್’ ಚಿತ್ರದ ಮೂರನೇ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ 6:00 ಗಂಟೆಗೆ ಬಿಡುಗಡೆಯಾಗಲಿದ್ದು, ರಾಜ್ ಬಿ ಶೆಟ್ಟಿ ಲಾಂಚ್ ಮಾಡಲಿದ್ದಾರೆ. ಈ ಕುರಿತು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಆಟ ಸೆಣಸಾಟ ಎಂಬ ಈ ಹಾಡಿಗೆ ಜೋನಿತ ಗಾಂಧಿ ಧ್ವನಿಗೂಡಿಸಿದ್ದು, ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿದ್ದಾರೆ. ಯುಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಪೂಜಾ ವಸಂತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶಾನ್ವಿ ಶ್ರೀವಾತ್ಸವ, ರಘು ದೀಕ್ಷಿತ್, ನಾಟ್ಯ ರಂಗ, ಜಹಾಂಗೀರ್, ಸಾತ್ವಿಕ, ಸುನೀಲ್ ಗುಜ್ಜರ್ ಸೇರಿದಂತೆ ಮೊದಲದ ಕಲಾವಿದರು ಅಭಿನಯಿಸಿದ್ದಾರೆ.
ರಿತ್ವಿಕ್ ಮುರುಳಿಧರ್ ಸಂಗೀತವಿರುವ ಈ ಸಿನಿಮಾ ಆಗಸ್ಟ್ 18ರಂದು ತೆರೆ ಕಾಣಲಿದೆ.
