alex Certify ಇಂದು ಬಿಡುಗಡೆಯಾಗಲಿದೆ ‘ಅಗ್ರಸೇನಾ’ ಚಿತ್ರದ ವಿಡಿಯೋ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬಿಡುಗಡೆಯಾಗಲಿದೆ ‘ಅಗ್ರಸೇನಾ’ ಚಿತ್ರದ ವಿಡಿಯೋ ಹಾಡು

ಜೂನ್ 23ರಂದು ರಾಜ್ಯಾದ್ಯಂತ ತೆರೆಕಾಣಲಿರುವ ‘ಅಗ್ರಸೇನಾ’ ಚಿತ್ರದ ‘ಚಂದಿರ’ ಎಂಬ ವಿಡಿಯೋ ಹಾಡೊಂದನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಮಾಡಲಿದ್ದಾರೆ.

ಮುರುಗೇಶ್ ಕಣ್ಣಪ್ಪ ನಿರ್ದೇಶನದ ಈ ಸಿನಿಮಾದಲ್ಲಿ ಅಮರ್ ವಿರಾಜ್ ನಾಯಕನಾಗಿ ಅಭಿನಯಿಸಿದ್ದಾರೆ.

ಶ್ರೀಮತಿ ವೈಷ್ಣವಿ ಸಿನೆಮಾಸ್ ಬ್ಯಾನರ್ ನಡಿ ಮಮತಾ ಜಯರಾಮ್ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಮರ್ ವಿರಾಜ್ ಗೆ ಜೋಡಿಯಾಗಿ ರಚನಾ ಅಭಿನಯಿಸಿದ್ದಾರೆ.

ಇದೊಂದು ಆಕ್ಷನ್ ಲವ್ ಸ್ಟೋರಿ ಡ್ರಾಮಾ ಕಥಾಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರಕ್ಕೆ ಎಂಎಸ್ ತ್ಯಾಗರಾಜ್ ಸಂಗೀತವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...