alex Certify ಇಂತಹ ನೃತ್ಯವನ್ನು ನೀವು ಇಲ್ಲಿಯವರೆಗೆ ನೋಡಿರಲು ಸಾಧ್ಯವಿಲ್ಲ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತಹ ನೃತ್ಯವನ್ನು ನೀವು ಇಲ್ಲಿಯವರೆಗೆ ನೋಡಿರಲು ಸಾಧ್ಯವಿಲ್ಲ..!

Viral Video: Woman Dances in a Scary Way, Netizens Can't Stop Laughing. Watchಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ, ಉಲ್ಲಾಸದ, ಭಯಾನಕ ಮುಂತಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋ ನೆಟ್ಟಿಗರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ.

ವಿಡಿಯೋ ಪ್ರಾರಂಭವಾಗುತ್ತಿದ್ದಂತೆ ಹಸಿರು ಸೀರೆಯನ್ನು ಧರಿಸಿದ ಮಹಿಳೆಯು ಹಾಡುವುದನ್ನು ನೋಡಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ನೆಲದ ಮೇಲೆ ಕುಳಿತಿದ್ದಾರೆ. ಸಂಗೀತಗಾರರ ಗುಂಪು, ತಬಲಾ, ಹಾರ್ಮೋನಿಯಂ ಮುಂತಾದವುಗಳನ್ನು ನುಡಿಸುತ್ತಿವೆ.

ಹಾಡು ಹಾಡುತ್ತಿದ್ದ ಮಹಿಳೆ, ಇದ್ದಕ್ಕಿದ್ದಂತೆ ಮೈಮೇಲೆ ದೆವ್ವ ಬಂದ ರೀತಿ ವರ್ತಿಸಿದ್ದಾಳೆ. ಅವಳು ನೃತ್ಯ ಮಾಡುತ್ತಾ ಜನರನ್ನು ಹೆದರಿಸುವಂತೆ ಭಾಸವಾಗುತ್ತದೆ. ಆದರೆ, ಇದೇನು ಸಾಮಾನ್ಯ ನೃತ್ಯವಲ್ಲ. ನಿಮ್ಮ ಜೀವನದಲ್ಲಿ ಅಂತಹ ನೃತ್ಯವನ್ನೂ ನೋಡಿರಲು ಖಂಡಿತಾ ಸಾಧ್ಯವಿಲ್ಲ. ಮೈಕ್ ಅನ್ನು ಕೈಯಲ್ಲಿ ಹಿಡಿದುಕೊಂಡು ಒಮ್ಮೆಲೆ ಕೆಳಗೆ ಬೀಳೋ ರೀತಿಯಲ್ಲಿ ಡಾನ್ಸ್ ಮಾಡಿದ್ದಾಳೆ. ನಂತರ ಪ್ರೇಕ್ಷಕರತ್ತ ಹಾರಿ ಕುಳಿತ ಭಂಗಿಯಲ್ಲೇ ನೃತ್ಯ ಮಾಡಿದ್ದಾಳೆ.

ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನ ಅಧಿಕೃತ ವೈರಲ್‌ಕ್ಲಿಪ್ಸ್ ಎಂಬ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗುತ್ತಿವೆ. ಅರೆ……. ಆಕೆಗೇನಾಯ್ತು ಅಂತಾ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿ ನಕ್ಕಿದ್ದಾರೆ.

ವಿಡಿಯೋದಿಂದ ತನಗೆ ಭಯವಾಯ್ತು ಎಂಬ ಶೀರ್ಷಿಕೆ ನೀಡಲಾಗಿದೆ. ಅನೇಕ ಬಳಕೆದಾರರು ನಗುವ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. ಕಾರ್ಯಕ್ರಮಕ್ಕೆ ಮೊದಲು ಆಕೆ ರೆಡ್ ಬುಲ್ ಅನ್ನು ಸೇವಿಸಿರಬೇಕು ಎಂದು ಒಬ್ಬ ಬಳಕೆದಾರರು ಹಾಸ್ಯಚಟಾಕಿ ಹಾರಿಸಿದ್ದಾರೆ.

https://www.youtube.com/watch?v=g7cuT3vjfZs

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...