alex Certify ಇಂಗ್ಲೆಂಡ್‌ನಲ್ಲಿ ಹಿಂದುಗಳ ಮೇಲಿನ ದಾಳಿಗೆ ಪ್ರಚೋದನೆ; ಜಾಲತಾಣದಲ್ಲೇ ಬಯಲಾಯ್ತು ಮುಸ್ಲಿಂ ಯುಟ್ಯೂಬರ್‌ ಕೃತ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಗ್ಲೆಂಡ್‌ನಲ್ಲಿ ಹಿಂದುಗಳ ಮೇಲಿನ ದಾಳಿಗೆ ಪ್ರಚೋದನೆ; ಜಾಲತಾಣದಲ್ಲೇ ಬಯಲಾಯ್ತು ಮುಸ್ಲಿಂ ಯುಟ್ಯೂಬರ್‌ ಕೃತ್ಯ….!

ಇಂಗ್ಲೆಂಡ್‌ನ ಈಸ್ಟ್ ಮಿಡ್‌ಲ್ಯಾಂಡ್ಸ್ ಪ್ರದೇಶದ ಲೀಸೆಸ್ಟರ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಮಧ್ಯೆ ಯುಟ್ಯೂಬರ್‌ ಒಬ್ಬ ಹಿಂದುಗಳ ಮೇಲೆ ದಾಳಿ ನಡೆಸುವಂತೆ ಮುಸಲ್ಮಾನರನ್ನು ಪ್ರೇರೇಪಿಸ್ತಾ ಇರೋದು ಬೆಳಕಿಗೆ ಬಂದಿದೆ. ಈತನ ಹೆಸರು ಮೊಹಮ್ಮದ್, ತಾನೊಬ್ಬ ಮುಸ್ಲಿಂ ವಿದ್ವಾಂಸನೆಂದು ಬಿಂಬಿಸಿಕೊಂಡಿದ್ದಾನೆ.

ಸಾಮಾಜಿಕ ತಾಣದಲ್ಲಿ ಈತ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾನೆ. ಮಾಸ್ಕ್‌ ಧರಿಸಿರುವ ಮುಸ್ಲಿಂ ಪುರುಷರೊಂದಿಗೆ ಸಂವಹನ ನಡೆಸುತ್ತಿರುವ ವಿಡಿಯೋ ಅದು. ಸ್ಥಳೀಯ ಹಿಂದುಗಳಿಗೆ ಪಾಠ ಕಲಿಸುವಂತೆ ಅವರನ್ನು ಮೊಹಮ್ಮದ್‌ ಪ್ರೋತ್ಸಾಹಿಸುತ್ತಿದ್ದಾನೆ.

“ಹಿಂದುಗಳು ಧೈರ್ಯಶಾಲಿಗಳೆಂದು ಕೇಳಿದ್ದೆ, ಆದ್ರಿವತ್ತು ಪಿನ್ ಡ್ರಾಪ್ ಸೈಲೆನ್ಸ್ ಆಗಿದ್ದು ಹೇಗೆ ? ಹಿಂದೂಗಳು ಹತ್ತಿರ ಇರುವಾಗ ನಮಗೆ ಭಯಪಡುತ್ತಾರೆ. ನಿಮಗೆ ಗೌರವ ಬೇಕಾದರೆ, ಗೌರವಿಸಲು ಕಲಿಯಿರಿ” ಎಂಬೆಲ್ಲಾ ಚರ್ಚೆಗಳು ಆ ಗುಂಪಿನಲ್ಲಿ ನಡೆದಿವೆ. ಹಿಂದೂ ವಿರೋಧಿ ಧೋರಣೆಯನ್ನು ಅವರು ಅನುಸರಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ಅಲ್ಲಾ ಹು ಅಕ್ಬರ್‌ನ ಕೂಗುಗಳ ನಡುವೆ, ಮೊಹಮ್ಮದ್ ತನ್ನ ಸಹ-ಧರ್ಮೀಯರು ಮಾಡಿದ ಹಿಂಸಾಚಾರದ ವಿರುದ್ಧ ಹಿಂದೂಗಳು ಪ್ರತಿಭಟಿಸಲು ಧೈರ್ಯಮಾಡಿದರೆ ತಕ್ಕ ಪಾಠ ಕಲಿಸ್ತೇನೆ ಅಂತಾ ಆತ ಹೇಳಿದ್ದಾನೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಈತ ಇಸ್ಲಾಮಿಸ್ಟ್‌ಗಳ ಉನ್ಮಾದದ ​​ಗುಂಪನ್ನು ಮುನ್ನಡೆಸುತ್ತಿರುವುದು ಸ್ಪಷ್ಟವಾಗಿದೆ. “ಲೀಸೆಸ್ಟರ್‌ನಲ್ಲಿ ಮುಸ್ಲಿಂ ಗಸ್ತು” ಎಂದಾತ ಬರೆದುಕೊಂಡಿದ್ದಾನೆ.

ಆನ್‌ಲೈನ್ ಧರ್ಮಭ್ರಷ್ಟರು ನಿಜವಾಗಿಯೂ ಧೈರ್ಯಶಾಲಿಗಳಾಗಿದ್ದರೆ ಅವರು ಮುಸ್ಲಿಮರೊಂದಿಗೆ ಮಾಡಿದಂತೆಯೇ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಅಪಹಾಸ್ಯದ ಸಂಪೂರ್ಣ ವೀಡಿಯೊವನ್ನು ಮಾಡಬೇಕು ಎಂದು ಪ್ರಚೋದಿಸಿದ್ದಾನೆ.  ಕಮ್ಯುನಿಟಿ ಸೆಕ್ಯುರಿಟಿ ಟ್ರಸ್ಟ್, ಮೊಹಮ್ಮದ್ ಹಿಜಾಬ್ನನ್ನು 2021 ರಲ್ಲಿ “ಪ್ರಭಾವಿ ಇಸ್ಲಾಮಿಸ್ಟ್ ಯುಟ್ಯೂಬರ್” ಎಂದು ಬಣ್ಣಿಸಿತ್ತು. ಈತ ಮೊದಲು ಲಂಡನ್‌ನಲ್ಲಿ ಇಸ್ರೇಲ್‌ ವಿರೋಧಿ ಪ್ರದರ್ಶನದ ಭಾಗವಾಗಿದ್ದ. ಅಲ್ಲಿ ಯಹೂದಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.

ಇಂಗ್ಲೆಂಡ್‌ನ ಈಸ್ಟ್ ಮಿಡ್‌ಲ್ಯಾಂಡ್ಸ್ ಪ್ರದೇಶದ ಲೀಸೆಸ್ಟರ್ ಸಿಟಿಯಲ್ಲಿ ಹಿಂದೂ ಸಮುದಾಯದ ವಿರುದ್ಧ ಉದ್ದೇಶಿತ ದಾಳಿ ನಡೆದಿತ್ತು. ಆಗಸ್ಟ್ 28 ರಂದು ನಡೆದ ಏಷ್ಯಾಕಪ್‌ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿದ ನಂತರ ಇಸ್ಲಾಮಿಸ್ಟ್‌ಗಳ ಹಿಂಸಾಚಾರವು ಪ್ರಾರಂಭವಾಯಿತು.

https://www.instagram.com/p/CiqHJuwI_-P/?utm_source=ig_embed&ig_rid=874a5217-5d20-43b8-b0eb-01f96688bdbe

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...