alex Certify ಇಂಗ್ಲೀಷ್ ನಲ್ಲಿ ಮಾತನಾಡಿದ ವೃದ್ಧೆ: ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಗ್ಲೀಷ್ ನಲ್ಲಿ ಮಾತನಾಡಿದ ವೃದ್ಧೆ: ಮನಸೋತ ನೆಟ್ಟಿಗರು

Watch: English-Speaking Grandma From Kashmir Takes Internet By Stormಕಾಶ್ಮೀರದ ವೃದ್ಧೆಯೊಬ್ಬರು ಇಂಗ್ಲೀಷ್ ಕಲಿತು ಮಾತನಾಡಿದ ವಿಡಿಯೋ ಇಂಟರ್ನೆಟ್ ನಲ್ಲಿ ಬಿರುಗಾಳಿಯೆಬ್ಬಿಸಿದೆ.

ಹೊಸದಾಗಿ ಕಲಿತ ಇಂಗ್ಲೀಷ್ ಕೌಶಲ್ಯವನ್ನು ಪ್ರದರ್ಶಿಸುವ 36 ಸೆಕೆಂಡುಗಳ ವಿಡಿಯೊವನ್ನು ಸೈಯದ್ ಸ್ಲೀಟ್ ಷಾ ಎಂಬಾತ ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಸದ್ಯ, ಈ ವಿಡಿಯೋ ಸಖತ್ ವೈರಲ್ ಆಗಿದೆ.

ಯುವಕ ಕಾಶ್ಮೀರಿ ಭಾಷೆಯಲ್ಲಿ ಕೆಲವು ಹಣ್ಣುಗಳು, ತರಕಾರಿಗಳು ಮತ್ತು ಪ್ರಾಣಿಗಳನ್ನು ಹೆಸರಿಸುತ್ತಾನೆ. ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿರುವ 80 ರ ಆಸುಪಾಸಿನಲ್ಲಿರುವ ವೃದ್ಧೆಯನ್ನು ಇಂಗ್ಲಿಷ್‌ನಲ್ಲಿ ಗುರುತಿಸುವಂತೆ ಕೇಳಿದ್ದಾನೆ. ಬೆಕ್ಕು ಎಂದು ಗುರುತಿಸುವಾಗ ಆಕೆ ಸ್ವಲ್ಪ ಎಡವಿದ್ರೂ, ನಂತರ ಪ್ರಾಣಿಯ ಹೆಸರನ್ನು ಕ್ಯಾಟ್ ಎಂದು ಉಚ್ಚರಿಸಿದ್ದಾರೆ. ಈರುಳ್ಳಿ, ಸೇಬು, ಬೆಳ್ಳುಳ್ಳಿ ಮತ್ತು ನಾಯಿಯನ್ನು ವಿಶಿಷ್ಟವಾದ ಉಚ್ಚರಣೆಯಲ್ಲಿ ಗುರುತಿಸುತ್ತಾರೆ. ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

ವೃದ್ಧೆಯು ಯಾವ ಪ್ರದೇಶದವರು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದರೆ, ವಿಡಿಯೋ ರೆಕಾರ್ಡ್ ಮಾಡುತ್ತಿರುವ ಯುವಕನ ಉಚ್ಚಾರಣೆ ಕೇಳಿದ್ರೆ ಕಣಿವೆ ಜಿಲ್ಲೆಗೆ ಸೇರಿದವರು ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನು, ಟ್ವಿಟರ್ ಬಳಕೆದಾರರು ಪೋಸ್ಟ್‌ಗೆ ಉತ್ತಮ ರೀತಿಯ ಕಾಮೆಂಟ್‌ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.

— Syed Sleet Shah (@Sleet_Shah) February 14, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...