ಇಂಗು ತೆಂಗು ಇದ್ದರೆ ಮಂಗ ಸಹ ಒಳ್ಳೆಯ ಅಡುಗೆ ಮಾಡುತ್ತೆ ಅನ್ನೋ ಗಾದೆ ಮಾತಿದೆ. ಅಡುಗೆಯಲ್ಲಿ ಇಂಗಿನ ಮಹತ್ವ ಅಂಥದ್ದು. ಇಂಗು ಅಡುಗೆಗೆ ಪರಿಮಳ ಅಷ್ಟೇ ಅಲ್ಲ, ಆರೋಗ್ಯಕ್ಕೂ ಸಹಕಾರಿ.
ಪ್ರತಿ ನಿತ್ಯ ಸಾರಿನ ಒಗ್ಗರಣೆಗೆ ಇಂಗು ಹಾಕುವುದರಿಂದ ಹುಳಿ ತೇಗು ಬರುವುದಿಲ್ಲ. ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
ಹುಳಿ ಬರದ ಮಜ್ಜಿಗೆಗೆ ಇಂಗಿನ ಒಗ್ಗರಣೆ ಹಾಕಿ, ಸ್ವಲ್ಪ ಹಸಿ ಶುಂಠಿ ತುರಿ ಹಾಗೂ ಕೊತ್ತಂಬರಿ ಬಳಸಿ ಕುಡಿದರೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಶಮನವಾಗಿ ದೇಹಕ್ಕೆ ಹಿತವಾಗುತ್ತದೆ.