alex Certify ಆಸ್ಪತ್ರೆಯಲ್ಲಿದ್ದ ಪತಿ ನೋಡಲು ಹೋಗುವಾಗಲೇ ಪತ್ನಿ ಸಾವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲಿದ್ದ ಪತಿ ನೋಡಲು ಹೋಗುವಾಗಲೇ ಪತ್ನಿ ಸಾವು…!

ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಯಲ್ಲಿದ್ದ ತಮ್ಮ ಪತಿಯನ್ನು ನೋಡಲು ಮಹಿಳೆಯೊಬ್ಬರು ಮೈದುನನ ಜೊತೆ ಬೈಕಿನಲ್ಲಿ ಹೋಗುವಾಗ ಅಪಘಾತ ಸಂಭವಿಸಿದ್ದು, ಇದರ ಪರಿಣಾಮ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಇಂತಹದೊಂದು ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದ್ದು, ತಾರೇಕಟ್ಟೆಯ 26 ವರ್ಷದ ಜ್ಞಾನೇಶ್ವರಿ ಮೃತಪಟ್ಟಿದ್ದಾರೆ. ಬೈಕ್ ಚಾಲನೆ ಮಾಡುತ್ತಿದ್ದ ಇವರ ಮೈದುನ ಪ್ರೇಮ್ ಸಾಗರ್ ಗಾಯಗೊಂಡು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜ್ಞಾನೇಶ್ವರಿ ಅವರ ಪತಿ ರಾಕೇಶ್ ಅನಾರೋಗ್ಯದ ಕಾರಣಕ್ಕೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರನ್ನು ನೋಡುವ ಸಲುವಾಗಿ ಇವರುಗಳು ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಲಾರಿಗೆ ಬೈಕು ಮುಖಾಮುಖಿ ಡಿಕ್ಕಿ ಹೊಡೆದಿದ್ದು ಈ ಘಟನೆ ಸಂಭವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...