ಉತ್ತರಪ್ರದೇಶದ ಬಿಜ್ನೋರ್‍ನಲ್ಲಿ ಖಾಸಗಿ ಆಸ್ಪತ್ರೆ ಆವರಣದಲ್ಲಿ ಎರಡು ಚಿರತೆಗಳು ನಿಂತಿರುವುದನ್ನು ಕಂಡು ಆಸ್ಪತ್ರೆಯೊಳಗಿನ ಸಿಬ್ಬಂದಿ ಹೌಹಾರಿದ್ದಾರೆ. ಆದರೆ , ಕೆಲವೇ ಸಮಯದಲ್ಲಿ ಮೂರು ಚಿರತೆ ಮರಿಗಳು ಆಸ್ಪತ್ರೆಯೊಳಗೆ ಕಾಣಿಸಿಕೊಂಡು ರೋಗಿಗಳನ್ನೂ ಗಾಬರಿಯಿಂದ ಮೂರ್ಛೆ ಹೋಗುವಂತೆ ಮಾಡಿವೆ.
ಹಲವು ಗಂಟೆಗಳ ಕಾಲ ಏನು ಮಾಡುವುದು ಎಂದು ತೋಚದೆಯೇ ಆಸ್ಪತ್ರೆಯ ಹಾಸಿಗೆ ಮೇಲೆ ನಿಂತುಕೊಂಡಿದ್ದ ಸಿಬ್ಬಂದಿ-ರೋಗಿಗಳು ಬಳಿಕ ಅರಣ್ಯ ಇಲಾಖೆಗೆ ಕರೆ ಮಾಡಿ ಸಹಾಯ ಬೇಡಿದ್ದಾರೆ.
ಚಿರತೆಯ ಖದರ್ ಲುಕ್ ಗೆ ಬೆರಗಾದ ನೆಟ್ಟಿಗರು….!
ಕೂಡಲೇ ಧಾವಿಸಿದ ರೇಂಜರ್ಸ್, ದೊಡ್ಡ ಚಿರತೆಗಳನ್ನು ಕಾಡಿನತ್ತ ಓಡಿಸಿದ್ದಾರೆ. ಆಸ್ಪತ್ರೆ ಪ್ರವೇಶಿಸಿ ಚಿರತೆಯ ಮರಿಗಳನ್ನು ಕಂಕುಳಲ್ಲಿ ಎತ್ತಿಕೊಂಡು ಕಚೇರಿಗೆ ಒಯ್ದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ವೈದ್ಯರಿಂದ ತಪಾಸಣೆ ಮಾಡಿಸಿದ ನಂತರ ಅವುಗಳನ್ನು ಪುನಃ ಕಾಡಿನೊಳಗೆ ನುಗ್ಗಿದ ಸ್ಥಳದಲ್ಲೇ ಬಿಟ್ಟಿದ್ದಾರೆ. ಕೆಲವೇ ಕ್ಷಣದಲ್ಲಿ ದೊಡ್ಡ ಚಿರತೆಗಳು ಆಗಮಿಸಿ, ಮರಿಗಳನ್ನು ಕರೆದೊಯ್ದಿವೆ.