alex Certify ಆಲಿಯಾ ಭಟ್​ಗೆ ಮಾಸ್ಕ್​ ತೆಗೆಯುವಂತೆ ಸೂಚಿಸಿದ ಸಿಐಎಸ್​ಎಫ್​ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಲಿಯಾ ಭಟ್​ಗೆ ಮಾಸ್ಕ್​ ತೆಗೆಯುವಂತೆ ಸೂಚಿಸಿದ ಸಿಐಎಸ್​ಎಫ್​ ಅಧಿಕಾರಿ

ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್​ ನಟಿ ಆಲಿಯಾ ಭಟ್​​ರನ್ನು ತಡೆದ ಸಿಐಎಸ್​ಎಫ್​ ಅಧಿಕಾರಿಯೊಬ್ಬರು ತಮ್ಮ ಗುರುತನ್ನು ಸಾಬೀತುಪಡಿಸುವ ಸಲುವಾಗಿ ಮಾಸ್ಕ್​ ತೆಗೆದು ತೋರಿಸುವಂತೆ ಆಲಿಯಾಗೆ ಸೂಚನೆ ನೀಡಿದ್ದಾರೆ.

ನಿನ್ನೆ ಸಂಜೆ ಆಲಿಯಾ ಭಟ್​ ತನ್ನ ಸಹೋದರಿ ಶಾಹೀನ್​ ಭಟ್​ ಜೊತೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಬರ್ಲಿನ್​​ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಭಟ್ ಸಹೋದರಿಯರು ಬರ್ಲಿನ್​ಗೆ ತೆರಳಲಿದ್ದರು ಎನ್ನಲಾಗಿದೆ.

ಏರ್​ಪೋರ್ಟ್​ನಲ್ಲಿ ಆಲಿಯಾ ಭಟ್​ ಹಾಗೂ ಶಾಹೀನ್​ ಭಟ್​ ನಿರ್ಗಮನ ಪ್ರವೇಶ ದ್ವಾರದ ಕಡೆಗೆ ಕೈ ಕೈ ಹಿಡಿದುಕೊಂಡು ಹೋಗುತ್ತಿರುವ ವಿಡಿಯೋವನ್ನು ಕಾಣಬಹುದಾಗಿದೆ. ಆಲಿಯಾ ಬಿಳಿ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡರೆ ಶಾಹೀನ್​ ಭಟ್​ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರು.

ಸಹೋದರಿಯರು ನಿರ್ಗಮನ ದ್ವಾರಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಸಿಐಎಸ್​ಎಫ್​ ಅಧಿಕಾರಿಯು ನಿಯಮದಂತೆ ದಾಖಲೆಗಳನ್ನು ಪ್ರಸ್ತುತಪಡಿಸುವಂತೆ ಹೇಳಿದ್ದಾರೆ. ಅಲ್ಲದೇ ಗುರುತನ್ನು ಸಾಬೀತುಪಡಿಸಲು ಮಾಸ್ಕ್​ ತೆಗೆದು ಮುಖ ತೋರಿಸುವಂತೆ ಅಧಿಕಾರಿ ಸೂಚಿಸಿದ್ದಾರೆ.

ಗಂಗೂಬಾಯಿ ಕಥಿಯಾವಾಡಿ ಬರ್ಲಿನ್​ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವ ಆಲಿಯಾ ಭಟ್​ರ ಎರಡನೇ ಸಿನಿಮಾವಾಗಿದೆ. ರಣವೀರ್​ ಸಿಂಗ್​ ಜೊತೆ ನಟಿಸಿದ್ದ ಗಲ್ಲಿ ಬಾಯ್​ ಸಿನಿಮಾ ಕೂಡ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...