
ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ರನ್ನು ತಡೆದ ಸಿಐಎಸ್ಎಫ್ ಅಧಿಕಾರಿಯೊಬ್ಬರು ತಮ್ಮ ಗುರುತನ್ನು ಸಾಬೀತುಪಡಿಸುವ ಸಲುವಾಗಿ ಮಾಸ್ಕ್ ತೆಗೆದು ತೋರಿಸುವಂತೆ ಆಲಿಯಾಗೆ ಸೂಚನೆ ನೀಡಿದ್ದಾರೆ.
ನಿನ್ನೆ ಸಂಜೆ ಆಲಿಯಾ ಭಟ್ ತನ್ನ ಸಹೋದರಿ ಶಾಹೀನ್ ಭಟ್ ಜೊತೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಭಟ್ ಸಹೋದರಿಯರು ಬರ್ಲಿನ್ಗೆ ತೆರಳಲಿದ್ದರು ಎನ್ನಲಾಗಿದೆ.
ಏರ್ಪೋರ್ಟ್ನಲ್ಲಿ ಆಲಿಯಾ ಭಟ್ ಹಾಗೂ ಶಾಹೀನ್ ಭಟ್ ನಿರ್ಗಮನ ಪ್ರವೇಶ ದ್ವಾರದ ಕಡೆಗೆ ಕೈ ಕೈ ಹಿಡಿದುಕೊಂಡು ಹೋಗುತ್ತಿರುವ ವಿಡಿಯೋವನ್ನು ಕಾಣಬಹುದಾಗಿದೆ. ಆಲಿಯಾ ಬಿಳಿ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡರೆ ಶಾಹೀನ್ ಭಟ್ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರು.
ಸಹೋದರಿಯರು ನಿರ್ಗಮನ ದ್ವಾರಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಸಿಐಎಸ್ಎಫ್ ಅಧಿಕಾರಿಯು ನಿಯಮದಂತೆ ದಾಖಲೆಗಳನ್ನು ಪ್ರಸ್ತುತಪಡಿಸುವಂತೆ ಹೇಳಿದ್ದಾರೆ. ಅಲ್ಲದೇ ಗುರುತನ್ನು ಸಾಬೀತುಪಡಿಸಲು ಮಾಸ್ಕ್ ತೆಗೆದು ಮುಖ ತೋರಿಸುವಂತೆ ಅಧಿಕಾರಿ ಸೂಚಿಸಿದ್ದಾರೆ.
ಗಂಗೂಬಾಯಿ ಕಥಿಯಾವಾಡಿ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವ ಆಲಿಯಾ ಭಟ್ರ ಎರಡನೇ ಸಿನಿಮಾವಾಗಿದೆ. ರಣವೀರ್ ಸಿಂಗ್ ಜೊತೆ ನಟಿಸಿದ್ದ ಗಲ್ಲಿ ಬಾಯ್ ಸಿನಿಮಾ ಕೂಡ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು.