alex Certify ಆಲಸ್ಯ ಮತ್ತು ಆಯಾಸವನ್ನು ತಕ್ಷಣವೇ ಓಡಿಸುವ ಇನ್‌ಸ್ಟಂಟ್‌ ಎನರ್ಜಿ ಡ್ರಿಂಕ್ಸ್‌! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಲಸ್ಯ ಮತ್ತು ಆಯಾಸವನ್ನು ತಕ್ಷಣವೇ ಓಡಿಸುವ ಇನ್‌ಸ್ಟಂಟ್‌ ಎನರ್ಜಿ ಡ್ರಿಂಕ್ಸ್‌!

ಆಯಾಸ ಮತ್ತು ಆಲಸ್ಯದಿಂದ ಪಾರಾಗಲು ನಾವು ಚಹಾ ಅಥವಾ ಕಾಫಿಯ ಮೊರೆಹೋಗುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತದೆ. ಇದು ಆಯಾಸವನ್ನು ತಕ್ಷಣವೇ ನಿವಾರಿಸಿ ತಾಜಾತನದ ಭಾವನೆಯನ್ನು ನೀಡುತ್ತದೆ. ಆದರೆ ಇದು ದೀರ್ಘಕಾಲಕ್ಕೆ ಸೂಕ್ತವಲ್ಲ.

ಟೀ ಅಥವಾ ಕಾಫಿ ನಮ್ಮನ್ನು ಸ್ವಲ್ಪ ಸಮಯದವರೆಗೆ ಮಾತ್ರ ಶಕ್ತಿಯುತವಾಗಿರಿಸುತ್ತದೆ. ನಂತರ ಮತ್ತೆ ಆಯಾಸ ಮತ್ತು ಸೋಮಾರಿತನ ನಮ್ಮನ್ನು ಕಾಡಲಾರಂಭಿಸುತ್ತದೆ. ಇದರಿಂದ ಪಾರಾಗಲು ಕೆಲವು ಎನರ್ಜಿ ಡ್ರಿಂಕ್‌ಗಳನ್ನು ಕುಡಿಯಬಹುದು. ಅವುಗಳಲ್ಲಿ ವಿಟಮಿನ್ ಮತ್ತು ಮಿನರಲ್‌ಗಳಿರುವುದರಿಂದ ದಿನವಿಡೀ ನಮಗೆ ಶಕ್ತಿಯನ್ನು ತುಂಬುತ್ತದೆ. ನೀವು ಮನೆಯಲ್ಲೇ ಇವುಗಳನ್ನು ಸುಲಭವಾಗಿ ತಯಾರಿಸಬಹುದು.

ಬಾಳೆಹಣ್ಣಿನ ಮಿಲ್ಕ್ ಶೇಕ್

ಇದು ಅತ್ಯಂತ ಆರೋಗ್ಯಕರ ಪಾನೀಯ. ಒಂದು ಬಾಳೆಹಣ್ಣು, ನಾಲ್ಕಾರು ಬಾದಾಮಿ, ಗೋಡಂಬಿ ಮತ್ತು ಇತರ ಡ್ರೈ ಫ್ರೂಟ್‌ಗಳನ್ನು ಹಾಲಿನೊಂದಿಗೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಬೇಕಿದ್ದರೆ ಬಾಳೆಹಣ್ಣಿನ ಜೊತೆಗೆ ಓಟ್ಸ್ ಕೂಡ ಬೆರೆಸಿ ಸ್ಮೂಥಿ ಮಾಡಿ ಕುಡಿಯಬಹುದು. ಬಾಳೆಹಣ್ಣು ಪೊಟ್ಯಾಸಿಯಮ್‌ನಂತಹ ಅನೇಕ ಖನಿಜಗಳಿಂದ ಸಮೃದ್ಧವಾಗಿದೆ. ಬೆಳಗ್ಗೆ ಬಾಳೆಹಣ್ಣಿನಿಂದ ಮಾಡಿದ ಮಿಲ್ಕ್‌ ಶೇಕ್ ಕುಡಿದರೆ ದಿನವಿಡೀ ಶಕ್ತಿಯ ಅನುಭವವಾಗುತ್ತದೆ.

ಹರ್ಬಲ್‌ ಟೀ

ಹರ್ಬಲ್‌ ಚಹಾ ಕೂಡ ಅತ್ಯಂತ ಆರೋಗ್ಯಕರ ಎನರ್ಜಿ ಡ್ರಿಂಕ್‌. ಏಲಕ್ಕಿ, ಶುಂಠಿ ಮತ್ತು ಅರಿಶಿನವನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಬೇಕಿದ್ದರೆ ಸ್ವಲ್ಪ ಬ್ಲಾಕ್‌ ಸಾಲ್ಟ್‌ ಕೂಡ ಬೆರೆಸಬಹುದು. ಮನೆಯಲ್ಲಿ ತಯಾರಿಸಿದ ಈ ಗಿಡಮೂಲಿಕೆ ಚಹಾವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಅದಕ್ಕಾಗಿಯೇ ಇದನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ.

ದಾಳಿಂಬೆ ರಸ

ದಾಳಿಂಬೆಯು ವಿಟಮಿನ್ ಸಿ, ಕೆ, ಇ, ಮ್ಯಾಂಗನೀಸ್, ಕಬ್ಬಿಣ, ರಂಜಕ, ಪೊಟ್ಯಾಸಿಯಮ್ ಮತ್ತು ಸತುವಿನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಇದರ ಬಳಕೆಯು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹ  ಸಹಾಯ ಮಾಡುತ್ತದೆ. ದಾಳಿಂಬೆ ಜ್ಯೂಸ್‌ ಮಾಡಿಕೊಂಡು ಅದಕ್ಕೆ ಅರ್ಧ ಚಮಚ ನಿಂಬೆ ರಸವನ್ನು ಬೆರೆಸಿಕೊಂಡು ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...