ಬೆಂಗಳೂರು: ದೇಶದ ಪ್ರಮುಖ ಸ್ಥಳಗಳು, ರಕ್ಷಣಾ ಸಂಸ್ಥೆ, ಅಂತರಾಷ್ಟ್ರೀಯ ಗಡಿಗಳಿಗೆ ಸಂಬಂಧಿಸಿದ ಫೋಟೋಗಳನ್ನು ವಿದೇಶಗಳಿಗೆ ಕಳುಹಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಬೆಂಗಳೂರಿನ ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಆರೋಪಿ ಜಿತೇಂದರ್ ಸಿಂಗ್ ನನ್ನು ಬಂಧಿಸಲಾಗಿದ್ದು, ಈತ ಮೂಲತ: ರಾಜಸ್ಥಾನದ ಬಾರ್ಮರ್ ನವನು. ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 11ರ ನಂತ್ರ ಮಹತ್ವದ ಬದಲಾವಣೆ: ಈ ರಾಶಿಯವರಿಗಿದೆ ಅದೃಷ್ಟ
ಆರ್ಮಿ ಕಮಾಂಡೋ ಯುನಿಫಾರ್ಮ್ ಧರಿಸಿ ಜಿತೆಂದರ್ ಸಿಂಗ್ ವಾಟ್ಸಪ್, ವಿಡಿಯೋಕಾಲ್, ವಾಟ್ಸಪ್ ಕಾಲ್ ಮೂಲಕ ಆಪರೇಟ್ ಮಾಡುತ್ತಿದ್ದ ಈತ ಪಾಕಿಸ್ತಾನದ ಐಎಸ್ ಐ ಅಧಿಕಾರಿಗಳ ಜೊತೆಯೂ ಸಂಪರ್ಕ ಹೊಂದಿದ್ದ. ಬಾರ್ಮರ್ ಮಿಲಿಟರಿ ಸ್ಟೇಷನ್, ಮಿಲಿಟರಿ ವಾಹನಗಳ ಓಡಾಟದ ಬಗ್ಗೆ ಮಾಹಿತಿ ವಿನಿಮಯ ಮಾಡುತ್ತಿದ್ದ.
ಜಿತೇಂದರ್ ಸಿಂಗ್ ದೇಶದ ಆಯಕಟ್ಟಿನ ಸ್ಥಳಗಳು, ರಕ್ಷಣಾ ಸಂಸ್ಥೆ, ಗಡಿಗೆ ಸಂಬಂಧಿಸಿದ ಫೋಟೋಗಳನ್ನು ಹಾಗೂ ಮಿಲಿಟರಿ ವಾಹನಗಳ ಬಗೆಗಿನ ಮಾಹಿತಿಗಳನ್ನು ವಿದೇಶಿ ಏಜೆನ್ಸಿಗಳಿಗೆ ಕಳುಹಿಸುತ್ತಿದ್ದ. ದೇಶದ ಹಲವು ಭಾಗಗಳಲ್ಲಿ ಕೃತ್ಯವೆಸಗಿದ್ದ ಈತ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರಿಯಾಗಿ ತಲೆಮರೆಸಿಕೊಂಡಿದ್ದ ಎಂದು ಸಿಸಿಬಿ ಪೊಲೀಸರು ವಿವರಿಸಿದ್ದಾರೆ.