ತುಳಸಿಗೆ ಹಿಂದೂಧರ್ಮದಲ್ಲಿ ಮಹತ್ವದ ಸ್ಥಾನವಿದೆ. ತುಳಸಿ ಲಕ್ಷ್ಮಿದೇವಿಯ ಸ್ವರೂಪ ಎಂಬ ನಂಬಿಕೆ ಇದೆ. ಹಾಗಾಗಿ ಹಿಂದೂಧರ್ಮದವರು ತುಳಸಿಯನ್ನು ಪೂಜಿಸುತ್ತಾರೆ. ಆದರೆ ಇಂತಹ ಪವಿತ್ರವಾದ ತುಳಸಿಗೆ ಈ ದಿನದಂದು ಜಲವನ್ನು ಅರ್ಪಿಸಬಾರದಂತೆ.
ತುಳಸಿ ಪೂಜೆ ಮಾಡುವಾಗ ಪ್ರತಿಯೊಬ್ಬರು ಪ್ರತಿದಿನ ಜಲವನ್ನು ಅರ್ಪಿಸಿ ಅರಶಿನ ಕುಂಕುಮ ಹಚ್ಚಿ ಹೂವನ್ನು ಅರ್ಪಿಸಿ ದೂಪ, ದೀಪಗಳನ್ನು ಬೆಳಗುತ್ತಾರೆ. ಆದರೆ ಶಾಸ್ತ್ರದ ಪ್ರಕಾರ ತುಳಸಿಗೆ ರವಿವಾರ, ಏಕಾದಶಿ, ಸೂರ್ಯ ಮತ್ತು ಚಂದ್ರ ಗ್ರಹಣದ ಸಮಯದಲ್ಲಿ ತುಳಸಿಗೆ ಜಲವನ್ನು ಅರ್ಪಿಸಬಾರದಂತೆ ಇದರಿಂದ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ.
ಹಾಗೆ ಗುರುವಾರದಂದು ಹಸಿ ಹಾಲನ್ನು ತುಳಸಿಗೆ ಅರ್ಪಿಸಬೇಕು. ಹಾಗೇ ರವಿವಾರವನ್ನು ಬಿಟ್ಟು ಉಳಿದ ದಿನಗಳಲ್ಲಿ ತುಳಸಿಗೆ ತುಪ್ಪದ ದೀಪವನ್ನು ಹಚ್ಚಬೇಕು. ಅಂತವರ ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ. ಇದರಿಂದ ಆರ್ಥಿಕ ವೃದ್ಧಿಯಾಗುತ್ತದೆಯಂತೆ.