alex Certify ಆರ್ಡರ್ ಮಾಡಿದ ಕೇಕ್ ನೋಡಿ ಶಾಕ್ ಆದ ಮಹಿಳೆ..! ಅಷ್ಟಕ್ಕೂ ಅದರಲ್ಲೇನಿತ್ತು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಡರ್ ಮಾಡಿದ ಕೇಕ್ ನೋಡಿ ಶಾಕ್ ಆದ ಮಹಿಳೆ..! ಅಷ್ಟಕ್ಕೂ ಅದರಲ್ಲೇನಿತ್ತು ಗೊತ್ತಾ ?

ಇತ್ತೀಚೆಗೆ ಯಾರಾದರೂ ತಮಗೆ ತಿನ್ನಲು ಅಥವಾ ಬರ್ತ್ ಡೇ ಮುಂತಾದ ಕಾರ್ಯಕ್ರಮ ಆಚರಿಸಲು ತತ್ ಕ್ಷಣ ಏನನ್ನಾದರೂ ತರಲು ಖುದ್ದು ತಾವೇ ಹೋಗಬೇಕೆಂದಿಲ್ಲ. ಇದಕ್ಕೆಂದೇ ಮನೆತನಕ ಆಹಾರ ಖಾದ್ಯಗಳನ್ನು ವಿತರಿಸುವ ಸಂಸ್ಥೆಗಳಿವೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದೀಗ ವಿಷಯ ಏನಪ್ಪಾ ಅಂತಾ ಕೇಳಿದ್ರೆ ಖಂಡಿತಾ ನೀವು ಬಿದ್ದು ಬಿದ್ದು ನಗೋದ್ರಲ್ಲಿ ಸಂಶಯವೇ ಇಲ್ಲ.

ಹೌದು, ಮಹಿಳೆಯೊಬ್ಬರು ಜೋಮ್ಯಾಟೋದಲ್ಲಿ ಕೇಕ್ ಆರ್ಡರ್ ಮಾಡಿದ್ದಾರೆ. ಈ ವೇಳೆ ಡೆಲಿವರಿ ಬಾಯ್ ಬಳಿ 500 ರೂ.ಗಳ ಚೇಂಜ್ ತರುವಂತೆ ಹೇಳಿದ್ದಾರೆ. ಬಹುಶಃ ಇದನ್ನು ಡೆಲಿವರಿ ಬಾಯ್ ತಪ್ಪಾಗಿ ತಿಳಿದುಕೊಂಡ ಅಂತಾ ಕಾಣುತ್ತದೆ. ಆತ ಕೇಕ್ ಮೇಲೆ ಬ್ರಿಂಗ್ 500 ರೂ. ಚೇಂಜ್ ( 500 ರೂ.ಗಳ ಚೇಂಜ್ ತನ್ನಿ) ಎಂದು ಬರೆಯಿಸಿದ್ದಾನೆ.

ಮನೆಗೆ ಬಂದ ಕೇಕ್ ಅನ್ನು ಒಳಗೆ ತೆಗೆದುಕೊಂಡು ಹೋಗಿ ಓಪನ್ ಮಾಡಿ ನೋಡಿದ ಮಹಿಳೆ ಅಕ್ಷರಶಃ ಶಾಕ್ ಗೆ ಒಳಗಾಗಿದ್ದಾರೆ. ವೈಷ್ಣವಿ ಮಾಂಡ್ಕರ್ ಎಂಬ ಮಹಿಳೆ ಇತ್ತೀಚೆಗೆ ಕೇಕ್ ಅನ್ನು ಆರ್ಡರ್ ಮಾಡಿದ್ದರು. ಬಾಕ್ಸ್ ತೆರೆದು ಕೇಕ್ ನೋಡಿದಾಗ ಒಮ್ಮೆ ತಬ್ಬಿಬ್ಬಾದ ಅವರಿಗೆ ಬಳಿಕ ನಗು ಬಂದಿದೆ.

ಇದರ ಫೋಟೋವನ್ನು ವೈಷ್ಣವಿ ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಕೂಡ ನಗೆಗಡಲಲ್ಲಿ ತೇಲಿದ್ದಾರೆ. ಹಲವರು ತಮಾಷೆ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...