alex Certify ಆರೋಗ್ಯ ಪೂರ್ಣ ಡಯಟ್ ನಿಂದ ಪಡೆಯಿರಿ ಈ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ಪೂರ್ಣ ಡಯಟ್ ನಿಂದ ಪಡೆಯಿರಿ ಈ ಲಾಭ

ಆರೋಗ್ಯ ಪೂರ್ಣ ಡಯಟ್ ನಿಂದ ನರರೋಗವನ್ನು ತಡೆಯಬಹುದು ಅನ್ನೋದು ಇತ್ತೀಚಿಗಿನ ಸಂಶೋಧನೆಯಿಂದ ತಿಳಿದುಬಂದಿದೆ. ಶೇಫೀಲ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಗೋಧಿ ಹಾಗೂ ಧಾನ್ಯಗಳಲ್ಲಿರುವ ಪ್ರೋಟೀನ್ ಅಂಶಗಳಿಲ್ಲದ ಆಹಾರ ಸೇವಿಸುವುದರಿಂದ ನರಗಳ ನೋವನ್ನು ತಡೆಯಬಹುದು ಎಂದು ಹೇಳಿದ್ದಾರೆ.

ಪ್ರೋಟೀನ್ ಗೂ ನರರೋಗಕ್ಕೂ ಸಂಬಂಧವಿದೆ. ಗ್ಲುಟೆನ್ ರಹಿತ ಆಹಾರ ಸೇವನೆಯ ಡಯಟ್ ಮಾಡಿದಲ್ಲಿ ನರರೋಗ ಬರುವ ಸಾಧ್ಯತೆ ಕಡಿಮೆ ಎಂಬುದಾಗಿ ಸಂಶೋಧಕರು ಹೇಳುತ್ತಾರೆ. ಸುಮಾರು 60 ಮಂದಿ ನರರೋಗ ಹೊಂದಿರುವವರು ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ನರರೋಗದಿಂದ ಕೈ, ಪಾದಗಳಲ್ಲಿ ನೋವು, ನಿಶ್ಯಕ್ತಿ ಹಾಗೂ ಮರಗಟ್ಟುವಿಕೆಯ ಲಕ್ಷಣಗಳು ಕಾಣುತ್ತವೆ. ಈ ಸಿಂಪಲ್ ಡಯಟ್ ನಿಂದ ನರರೋಗದಿಂದ ಉಂಟಾಗಬಹುದಾದ ನೋವನ್ನು ಕಡಿಮೆ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...