alex Certify ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ʼಕಡಲೆಕಾಯಿʼ ಸೌಂದರ್ಯ ವರ್ಧಕವೂ ಹೌದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ʼಕಡಲೆಕಾಯಿʼ ಸೌಂದರ್ಯ ವರ್ಧಕವೂ ಹೌದು

ಬಡವರ ಬಾದಾಮಿ ಎಂದು ಶೇಂಗಾವನ್ನು ಕರೆಯಲಾಗುತ್ತದೆ. ಕಡಲೆಕಾಯಿಯನ್ನು ಟೈಮ್ ಪಾಸ್ ಎಂದೂ ಕರೆಯಲಾಗುತ್ತದೆ. ಕಡಲೆಕಾಯಿಯನ್ನು ಮೊದಲ ಬಾರಿ ಆಫ್ರಿಕಾದಲ್ಲಿ ಬೆಳೆಯಲಾಯಿತು. ಅಡುಗೆಗೆ ಇದನ್ನು ಅನೇಕರು ಪ್ರತಿನಿತ್ಯ ಬಳಸುತ್ತಾರೆ. ಶೇಂಗಾದಿಂದ ಅನೇಕ ಪ್ರಯೋಜನವಿದೆ. ಜನರು ಚಳಿಗಾಲದಲ್ಲಿ ಹುರಿದ ಕಡಲೆಕಾಯಿಯನ್ನು ತಿನ್ನುತ್ತಾರೆ. ಕಡಲೆಕಾಯಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.

 ಕಡಲೆಕಾಯಿ ಬೊಜ್ಜು ಕಡಿಮೆ ಮಾಡುತ್ತದೆ. ಇದು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೀವಂತ ಕೋಶಗಳನ್ನು ಸಮತೋಲನದಲ್ಲಿಡುತ್ತದೆ. ಪ್ರತಿ ದಿನ ಒಂದರಿಂದ ಎರಡು ಚಮಚ ಕಡಲೆಕಾಯಿ ಸೇವನೆ ಮಾಡಬೇಕು.

ಗರ್ಭಿಣಿಯರು ಕಡಲೆಕಾಯಿ ತಿನ್ನಬೇಕು. ಇದು ತುಂಬಾ ಪ್ರಯೋಜನಕಾರಿ. ಫಲವತ್ತತೆಯನ್ನು ಹೆಚ್ಚಿಸುವದರ ಜೊತೆಗೆ ಹೊಟ್ಟೆ ನೋವಿನಿಂದ ಪರಿಹಾರ ನೀಡುತ್ತದೆ. ಇದು ಮುಟ್ಟಿನ ನೋವಿನಿಂದಲೂ ಪರಿಹಾರ ನೀಡುತ್ತದೆ. ಕಡಲೆಕಾಯಿ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚುವುದರಿಂದ, ಸುಕ್ಕುಗಳು ಮತ್ತು ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳು ಚರ್ಮದ ಮೇಲೆ ತಡವಾಗಿ ಗೋಚರಿಸುತ್ತವೆ. ಇದು ವ್ಯಕ್ತಿ ವಯಸ್ಕನಂತೆ ಕಾಣಲು ನೆರವಾಗುತ್ತದೆ. ಕಡಲೆಕಾಯಿ ಎಣ್ಣೆಯಲ್ಲಿ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಬೇಕು. 10 ನಿಮಿಷಗಳ ನಂತರ ಮುಖವನ್ನು ತೊಳೆಯಬೇಕು.

ಚರ್ಮದ ಸ್ವಚ್ಛತೆಗೂ ಇದು ಸಹಕಾರಿ. ಇದ್ರ ಎಣ್ಣೆಯನ್ನು ನೇರವಾಗಿ ಮುಖಕ್ಕೆ ಹಚ್ಚಬಹುದು.

ಕಡಲೆಕಾಯಿಯಲ್ಲಿ ಬಯೋಟಿನ್ ಪ್ರಮಾಣವು ಕಂಡುಬರುತ್ತದೆ. ಇದು ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ತಲೆಹೊಟ್ಟು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಶೇಂಗಾ ಸೇವನೆ ವೇಳೆ ಕೆಲ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕಡಲೆಕಾಯಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗಬಹುದು. ತುರಿಕೆ ಕಾಡಬಹುದು. ಅತಿಯಾಗಿ ತಿನ್ನುವುದರಿಂದ ಪಿತ್ತರಸ ನಾಳದ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಅತಿಯಾದ ಸೇವನೆ ಬೇಡ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...